ದಿಲ್ಲಿಯ ಬಾಬರ್ ರಸ್ತೆ ನಾಮಫಲಕ ವಿರೂಪಗೊಳಿಸಿ ʼಅಯೋಧ್ಯೆ ಮಾರ್ಗʼ ಎಂಬ ಭಿತ್ತಿ ಪತ್ರ ಅಂಟಿಸಿದ 'ಹಿಂದೂ ಸೇನಾ' ಕಾರ್ಯಕರ್ತರು
Photo: NDTV
ಹೊಸದಿಲ್ಲಿ: ತನ್ನನ್ನು ತಾನು ಹಿಂದೂ ಸೇನಾ ಎಂದು ಕರೆದುಕೊಂಡಿರುವ ಗುಂಪೊಂದು ಶನಿವಾರ ಕೇಂದ್ರ ದಿಲ್ಲಿಯಲ್ಲಿರುವ ಬಾಬರ್ ರಸ್ತೆಯ ನಾಮಫಲಕವನ್ನು ವಿರೂಪಗೊಳಿಸಿದ್ದು, ಆ ರಸ್ತೆಯ ಹೆಸರನ್ನು ಮರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಿಂದೂ ಸೇನಾ ಕಾರ್ಯಕರ್ತರೆಂದು ಹೇಳಲಾಗಿರುವ ದುಷ್ಕರ್ಮಿಗಳು ಬಾಬರ್ ರಸ್ತೆ ನಾಮಫಲಕದ ಮೇಲೆ ‘ಅಯೋಧ್ಯೆ ಮಾರ್ಗ’ ಎಂಬ ಭಿತ್ತಿ ಪತ್ರವನ್ನು ಅಂಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದಿಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು, ನಾವು ಆ ಭಿತ್ತಿ ಪತ್ರವನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದು, ಈ ಸಂಬಂಧ ಪೊಲೀಸ್ ದೂರನ್ನು ದಾಖಲಿಸುವುದಾಗಿ ತಿಳಿಸಿದ್ದಾರೆ.
ಈ ನಡುವೆ, ಹಿಂದೂ ಸೇನಾ ಅಧ್ಯಕ್ಷನೆಂದು ಹೇಳಿಕೊಂಡಿರುವ ವಿಷ್ಣು ಗುಪ್ತಾ ಎಂಬ ವ್ಯಕ್ತಿ, ಬಾಬರ್ ರಸ್ತೆಗೆ ಮರು ನಾಮಕರಣ ಮಾಡಬೇಕು ಎಂದು ದೀರ್ಘಕಾಲದಿಂದ ಆಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
Next Story