ದಿಲ್ಲಿಯಲ್ಲಿ ದಟ್ಟ ಮಂಜು | ಎರಡನೇ ದಿನ 15 ವಿಮಾನಯಾನಗಳ ಮಾರ್ಗ ಬದಲು, 82 ರೈಲುಗಳು ವಿಳಂಬ

PC : PTI
ಹೊಸದಿಲ್ಲಿ : ಸತತ ಎರಡನೇ ದಿನವಾದ ಶನಿವಾರ ಬೆಳಿಗ್ಗೆಯೂ ದಿಲ್ಲಿಯಲ್ಲಿ ದಟ್ಟ ಮಂಜು ಮುಂದುವರಿದಿದ್ದು, ನಗರದ ಹಲವು ಭಾಗಗಳಲ್ಲಿ ಗೋಚರತೆ ಕ್ಷೀಣಿಸಿತ್ತು. ರಾಷ್ಟ್ರ ರಾಜಧಾನಿಯಿಂದ 15ಕ್ಕೂ ಅಧಿಕ ವಿಮಾನ ಯಾನಗಳ ಮಾರ್ಗಗಳನ್ನು ಬದಲಿಸಲಾಗಿದ್ದು, 81 ರೈಲುಗಳು ವಿಳಂಬವಾಗಿ ಚಲಿಸಿದವು.
ಪಾಲಮ್ನಲ್ಲಿ ಶುಕ್ರವಾರ ರಾತ್ರಿ 11:30ರಿಂದ ಮತ್ತು ಸಫ್ದರ್ ಜಂಗ್ನಲ್ಲಿ ಶನಿವಾರ ನಸುಕಿನ 12:30ರಿಂದ ಗೋಚರತೆ ಮಟ್ಟ ಶೂನ್ಯಕ್ಕಿಳಿದಿದ್ದನ್ನು ಹವಾಮಾನ ಇಲಾಖೆಯು ದೃಢಪಡಿಸಿದೆ.
ಶನಿವಾರ ಬೆಳಿಗ್ಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನಿಂದಾಗಿ ಗೋಚರತೆ ಮಟ್ಟವು ಶೂನ್ಯಕ್ಕಿಳಿದಿತ್ತು.
59 ರೈಲುಗಳು ಆರು ಗಂಟೆಗಳಷ್ಟು ಮತ್ತು 22 ರೈಲುಗಳು ಎಂಟು ಗಂಟೆಗಳಷ್ಟು ವಿಳಂಬಗೊಂಡಿವೆ ಎಂದು ಉತ್ತರ ರೈಲ್ವೆಯು ವರದಿ ಮಾಡಿದೆ. ಈ ನಡುವೆ ದಿಲ್ಲಿಯಲ್ಲಿ ಶನಿವಾರ ಬೆಳಿಗ್ಗೆ ಒಂಭತ್ತು ಗಂಟೆಗೆ ಎಕ್ಯೂಐ 380ರಷ್ಟಿದ್ದು,
ಅತ್ಯಂತ ಕಳಪೆ ವಾಯು ಗುಣಮಟ್ಟ ದಾಖಲಾಗಿತ್ತು. ಬೆಳಿಗ್ಗೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕೊಂಚ ಹೆಚ್ಚು,7.8 ಡಿ.ಸೆ.ಇತ್ತು.





