ಮಹಾರಾಷ್ಟ್ರ ರಾಜ್ಯಪಾಲರಾಗಿ ದೇವವ್ರತ ಪ್ರಮಾಣವಚನ

PC : X/@CMOMaharashtra
ಮುಂಬೈ,ಸೆ.15: ಆಚಾರ್ಯ ದೇವವ್ರತ ಅವರು ಸೋಮವಾರ ಮಹಾರಾಷ್ಟ್ರ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗುಜರಾತಿನ ಹಾಲಿ ರಾಜ್ಯಪಾಲರಾಗಿರುವ ದೇವವ್ರತ ಅವರಿಗೆ ಹೆಚ್ಚುವರಿಯಾಗಿ ಮಹಾರಾಷ್ಟ್ರದ ಹೊಣೆಯನ್ನು ವಹಿಸಲಾಗಿದೆ.
ಇಲ್ಲಿಯ ರಾಜಭವನದ ದರ್ಬಾರ್ ಹಾಲ್ನಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ.ಶ್ರೀ ಚಂದ್ರಶೇಖರ ಅವರು ದೇವವ್ರತರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ದೇವವ್ರತ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದರಿಂದ ಈ ಹುದ್ದೆ ತೆರವಾಗಿದ್ದು,ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇವವೃತ ಅವರಿಗೆ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿ ಆದೇಶಿಸಿದ್ದರು.
ದೇವವ್ರತ 2019, ಜು.22ರಿಂದ ಗುಜರಾತ್ ರಾಜ್ಯಪಾಲರಾಗಿದ್ದಾರೆ. ಅದಕ್ಕೂ ಮುನ್ನ ಅವರು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು.
Next Story





