ಮಹಾರಾಷ್ಟ್ರ| ಡಿಜಿಟಲ್ ಅರೆಸ್ಟ್: ಹಿರಿಯ ನಾಗರಿಕನಿಗೆ 23.5 ಲಕ್ಷ ರೂ.ವಂಚನೆ

ಸಾಂದರ್ಭಿಕ ಚಿತ್ರ | Photo Credit : freepik
ಥಾಣೆ, ಡಿ. 22: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 68 ವರ್ಷದ ವೃದ್ಧರೋರ್ವರಿಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ನ ಬೆದರಿಕೆ ಒಡ್ಡಿ 23.5 ಲಕ್ಷ ರೂ. ವಂಚಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಥಾಣೆ ಜಿಲ್ಲೆಯಲ್ಲಿ ಈ ವಾರ ವರದಿಯಾಗುತ್ತಿರುವ ಎರಡನೇ ಘಟನೆ ಇದಾಗಿದೆ ಎಂದು ಅವರು ಹೇಳಿದ್ದಾರೆ.
ದೂರಿನ ಆಧಾರದಲ್ಲಿ ಕಲ್ಯಾಣ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಹಾತ್ಮಾ ಫುಲೆ ಪೊಲೀಸ್ ಠಾಣೆಯ ಸಹಾಯಕ ಇನ್ಸ್ಪೆಕ್ಟರ್ ವಿನೋದ್ ಪಾಟೀಲ್ ಹೇಳಿದ್ದಾರೆ.
ಆರೋಪಿಗಳು ಸಂತ್ರಸ್ತನನ್ನು ಮತ್ತೆ ಮತ್ತೆ ಬೆದರಿಸಿದರು. 23.5 ಲಕ್ಷ ರೂ.ವನ್ನು ಆನ್ಲೈನ್ ಮೂಲಕ ಹಲವು ಬಾರಿ ವರ್ಗಾಯಿಸುವಂತೆ ಒತ್ತಡ ಹೇರಿದರು ಎಂದು ಅವರು ತಿಳಿಸಿದ್ದಾರೆ.
Next Story





