ಡಿಜಿಟಲ್ ವಂಚನೆ | 2024ರಲ್ಲಿ ಭಾರತೀಯರಿಂದ 23,000 ಕೋಟಿ ರೂ. ದೋಚಿದ ಸೈಬರ್ ಕ್ರಿಮಿನಲ್ ಗಳು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.1: 2024ರಲ್ಲಿ ಭಾರತವು ಸೈಬರ್ ಕ್ರಿಮಿನಲ್ ಗಳು ಮತ್ತು ವಂಚಕರಿಂದಾಗಿ 22,842 ಕೋಟಿ ರೂ.ಗಳನ್ನು ಕಳೆದುಕೊಂಡಿದೆ ಎಂದು ದಿಲ್ಲಿಯ ಮಾಧ್ಯಮ ಮತ್ತು ತಂತ್ರಜ್ಞಾನ ಕಂಪನಿ ಡೇಟಾಲೀಡ್ಸ್ ದೇಶದಲ್ಲಿ ವ್ಯಾಪಕವಾಗಿರುವ ಡಿಜಿಟಲ್ ಹಣಕಾಸು ವಂಚನೆಗಳ ಕುರಿತು ತನ್ನ ವರದಿಯಲ್ಲಿ ಹೇಳಿದೆ.
ಈ ನಡುವೆ ರಾಜ್ಯ ಮತ್ತು ಕೇಂದ್ರ ಕಾನೂನು ಜಾರಿ ಸಂಸ್ಥೆಗಳ ನಡುವೆ ಸಂಪರ್ಕ ಸೇತುವಾಗಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ I4C, ಈ ವರ್ಷ ಭಾರತೀಯರು ವಂಚನೆಗಳಿಂದಾಗಿ 1.2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಿದೆ.
ಕಳೆದ ವರ್ಷ ಡಿಜಿಟಲ್ ಅಪರಾಧಿಗಳು ಮತ್ತು ವಂಚಕರು ದೋಚಿರುವ ಮೊತ್ತವು 2023ರಲ್ಲಿದ್ದ 7,465 ಕೋಟಿ ರೂ.ಗಳ ಸುಮಾರು ಮೂರು ಪಟ್ಟು ಮತ್ತು 2022ರಲ್ಲಿದ್ದ 2,306 ಕೋಟಿ ರೂ.ಗಳ ಸುಮಾರು ಹತ್ತು ಪಟ್ಟುಗಳಷ್ಟಿದೆ ಎಂದು ಡೇಟಾಲೀಡ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
Next Story





