ಭಾರತದ ವಿಭಜನೆಗೆ ಕಾರಣವಾಗಿದ್ದು ಜಿನ್ನಾ, ಸಾವರ್ಕರ್ ; ದಿಗ್ವಿಜಯ ಸಿಂಗ್ ಆರೋಪ

ದಿಗ್ವಿಜಯ ಸಿಂಗ್ | Photo Credit : PTI
ಇಂದೋರ್: 1947ರಲ್ಲಿ ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಹಾಗೂ ಮುಹಮ್ಮದ್ ಅಲಿ ಜಿನ್ನಾ ಭಾರತದ ವಿಭಜನೆಗೆ ಕಾರಣರಾದರು. ಇದೀಗ, ಬಿಜೆಪಿ ನಗರಗಳು ಹಾಗೂ ನೆರೆಹೊರೆಯವರನ್ನು ವಿಭಜಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಸಾಗರ್ ನಗರದಲ್ಲಿನ ಎರಡು ಮುಸ್ಲಿಂ ಬಾಹುಳ್ಯ ಪ್ರದೇಶಗಳಿಂದ ಹಿಂದೂಗಳು ವಲಸೆ ಹೋಗುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಹಾಗೂ ಸಾವರ್ಕರ್ ದೇಶವನ್ನು ವಿಭಜಿಸಿದರು ಹಾಗೂ ಇದೀಗ ಬಿಜೆಪಿ ನಗರಗಳು ಹಾಗೂ ಪ್ರತಿ ನೆರೆಹೊರೆಯವರನ್ನು ವಿಭಜಿಸುತ್ತಿದೆ” ಎಂದು ಟೀಕಿಸಿದರು.
ಅಕ್ಟೋಬರ್ 31ರಂದು ಬಿಜೆಪಿ ‘ಏಕತಾ ಓಟ’(Run for Unity) ಹಮ್ಮಿಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿಗ್ವಿಜಯ್ ಸಿಂಗ್, “ನಾವಿದನ್ನು ಸ್ವಾಗತಿಸುತ್ತೇವಾದರೂ, ಅಕ್ಟೋಬರ್ 31 ಹುತಾತ್ಮರ ದಿನವೂ ಆಗಿದೆ ಎಂಬುದನ್ನು ಮರೆಯಕೂಡದು” ಎಂದು ದಿಗ್ವಿಜಯ್ ಸಿಂಗ್ ಹೇಳಿದರು.





