ಚೆಕ್ ಬೌನ್ಸ್ ಪ್ರಕರಣ : ಚಿತ್ರ ನಿರ್ದೇಶಕ ರಾಜ್‌ಕುಮಾರ್ ಸಂತೋಷಿಗೆ 2 ವರ್ಷಗಳ ಜೈಲು

ಹೊಸದಿಲ್ಲಿ: ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಚಿತ್ರ ನಿರ್ದೇಶಕ ರಾಜ್‌ಕುಮಾರ್ ಸಂತೋಷಿಗೆ ಗುಜರಾತಿನ ಜಾಮ್ನಗರದ ಸ್ಥಳೀಯ ನ್ಯಾಯಾಲಯ 2 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 2 ಕೋಟಿ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ದೂರುದಾರಾಗಿರುವ ಉದ್ಯಮಿ ಹಾಗೂ ಹಡಗು ಉದ್ಯಮಿ ಅಶೋಕ್ ಲಾಲ್ ಚಿತ್ರವೊಂದಕ್ಕೆ ರಾಜ್ಕುಮಾರ್ ಸಂತೋಷಿಗೆ 1 ಕೋಟಿ ರೂ. ಸಾಲ ನೀಡಿದ್ದರು. ರಾಜ್ಕುಮಾರ್ ಸಂತೋಷಿ ಅವರು 10 ಲಕ್ಷ ರೂಪಾಯಿಯ 10 ಚೆಕ್ ಗಳನ್ನು ನೀಡಿದ್ದರು. ಆದರೆ, ಆ ಚೆಕ್ ಗಳು ಬೌನ್ಸ್ ಆಗಿದ್ದವು.
Next Story





