ಮುಂದಿನ 24 ಗಂಟೆಗಳಲ್ಲಿ ಭಾರತದ ಮೇಲಿನ ಸುಂಕವನ್ನು ಏರಿಕೆ ಮಾಡಲಾಗುವುದು: ಟ್ರಂಪ್ ಬೆದರಿಕೆ

ಡೊನಾಲ್ಡ್ ಟ್ರಂಪ್ , ನರೇಂದ್ರ ಮೋದಿ | PTI
ನ್ಯೂಯಾರ್ಕ್: ಭಾರತವೆಂದೂ ಉತ್ತಮ ವ್ಯಾವಹಾರಿಕ ಪಾಲುದಾರನಾಗಿರಲಿಲ್ಲ ಎಂದು ಮಂಗಳವಾರ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಂದಿನ 24 ಗಂಟೆಗಳಲ್ಲಿ ಭಾರತದ ಮೇಲಿನ ಸುಂಕವನ್ನು ಗಮನಾರ್ಹವಾಗಿ ಏರಿಕೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
CNBC Squawk Box ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಡೊನಾಲ್ಡ್ ಟ್ರಂಪ್, “ಭಾರತದ ಬಗ್ಗೆ ಜನ ಏನನ್ನು ಹೇಳಲು ಬಯಸುವುದಿಲ್ಲವೆಂದರೆ, ಅವರು ಅತ್ಯಧಿಕ ಸುಂಕ ವಿಧಿಸುವ ದೇಶವಾಗಿದ್ದಾರೆ. ಬೇರೆಲ್ಲರಿಗಿಂತ ಅವರು ಅತ್ಯಧಿಕ ಸುಂಕ ಪ್ರಮಾಣ ಹೊಂದಿದ್ದಾರೆ. ಅವರ ಸುಂಕ ಅತ್ಯಧಿಕವಾಗಿರುವುದರಿಂದ ನಾವು ಅವರೊಂದಿಗೆ ತೀರಾ ತೀರಾ ಅತ್ಯಲ್ಪ ವ್ಯವಹಾರ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಭಾರತವೆಂದಿಗೂ ಉತ್ತಮ ವ್ಯಾವಹಾರಿಕ ಪಾಲುದಾರನಾಗಿರಲಿಲ್ಲ. ಯಾಕೆಂದರೆ, ಅವರು ನಮ್ಮೊಂದಿಗೆ ಸಾಕಷ್ಟು ವ್ಯವಹಾರ ಮಾಡುತ್ತಾರಾದರೂ, ನಾವು ಅವರೊಂದಿಗೆ ಹೆಚ್ಚು ವ್ಯವಹಾರ ಮಾಡುವುದಿಲ್ಲ. ಹೀಗಾಗಿ ನಾವು ಶೇ. 25ರಷ್ಟು ಸುಂಕ ಹೇರಲು ನಿರ್ಧರಿಸಿದ್ದೆವು. ಆದರೆ, ಅವರು ರಶ್ಯವದಿಂದ ತೈಲ ಖರೀದಿಸುತ್ತಿರುವುದರಿಂದ, ಮುಂದಿನ 24 ಗಂಟೆಗಳಲ್ಲಿ ಈ ಸುಂಕದ ಪ್ರಮಾಣವನ್ನು ನಾನು ಗಮನಾರ್ಹವಾಗಿ ಏರಿಕೆ ಮಾಡಬಹುದು ಎಂದು ನನಗನ್ನಿಸುತ್ತಿದೆ” ಎಂದು ಅವರು ಬೆದರಿಕೆ ಒಡ್ಡಿದ್ದಾರೆ.





