Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಜಾಪ್ರಭುತ್ವದ ಬಲಕ್ಕೆ ಕರಡು ರಚನಾ...

ಪ್ರಜಾಪ್ರಭುತ್ವದ ಬಲಕ್ಕೆ ಕರಡು ರಚನಾ ಕೌಶಲ್ಯ ಅವಶ್ಯಕ : ಸ್ಪೀಕರ್ ಯು.ಟಿ. ಖಾದರ್

ವಾರ್ತಾಭಾರತಿವಾರ್ತಾಭಾರತಿ27 Sept 2025 6:44 PM IST
share
ಪ್ರಜಾಪ್ರಭುತ್ವದ ಬಲಕ್ಕೆ ಕರಡು ರಚನಾ ಕೌಶಲ್ಯ ಅವಶ್ಯಕ : ಸ್ಪೀಕರ್ ಯು.ಟಿ. ಖಾದರ್
ಹರಿಯಾಣ ವಿಧಾನಸಭೆಯಲ್ಲಿ ಶಾಸಕಾಂಗ ಕರಡು ರಚನಾ ತರಬೇತಿ ಕಾರ್ಯಕ್ರಮ

ಚಂಡೀಗಢ: ಕಾನೂನುಗಳ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸಲು ಕರಡು ರಚನಾ ಕೌಶಲ್ಯ ಅವಶ್ಯಕ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಹರಿಯಾಣ ವಿಧಾನಸಭೆಯು ಲೋಕಸಭೆಯ ಸಾಂವಿಧಾನಿಕ ಮತ್ತು ಸಂಸದೀಯ ಅಧ್ಯಯನ ಸಂಸ್ಥೆ (ICPS) ಸಹಯೋಗದಲ್ಲಿ ಆಯೋಜಿಸಿದ್ದ ಶಾಸಕಾಂಗ ಕರಡು ರಚನಾ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಹರಿಯಾಣ ವಿಧಾನಸಭೆಯ ಈ ಉಪಕ್ರಮವನ್ನು ಶ್ಲಾಘಿಸಿದ ಯುಟಿ ಖಾದರ್, "ಪ್ರಜಾಪ್ರಭುತ್ವದ ದೇವಾಲಯವೆಂದು ಕರೆಯಲ್ಪಡುವ ಸಂಸತ್ತು ಹಾಗೂ ರಾಜ್ಯ ಶಾಸನಾಂಗಗಳು ರಾಷ್ಟ್ರದ ಅತಿ ಶ್ರೇಷ್ಠ ಕಾನೂನು ರೂಪಿಸುವ ಸಂಸ್ಥೆಗಳು. ಈ ಸಂಸ್ಥೆಗಳ ಪ್ರಮುಖ ಕರ್ತವ್ಯವೇ ಶಾಸನ ರಚನೆ. ಕಾನೂನುಗಳ ಗುಣಮಟ್ಟವು ಅವುಗಳಲ್ಲಿ ಅಡಗಿರುವ ನಿಖರತೆ, ಸ್ಪಷ್ಟತೆ ಮತ್ತು ದೂರದೃಷ್ಟಿಗಳ ಮೇಲೆ ಅವಲಂಬಿತವಾಗಿದೆ" ಎಂದು ಹೇಳಿದರು.

“ಅತ್ಯಂತ ಸದುದ್ದೇಶವುಳ್ಳ ಕಾನೂನು ಕೂಡ ಸೂಕ್ತ ಜಾಗ್ರತೆ, ಸಮಗ್ರ ಚಿಂತನೆ ಹಾಗೂ ನಿಖರ ರಚನೆಯಿಲ್ಲದೆ ತನ್ನ ಉದ್ದೇಶ ಕಳೆದುಕೊಳ್ಳಬಹುದು. ಅಸಮರ್ಪಕ ಕಾನೂನುಗಳು ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗುತ್ತವೆ ಮತ್ತು ದೀರ್ಘಕಾಲದ ನ್ಯಾಯಾಂಗ ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಡುತ್ತವೆ. ಇದರಿಂದ ಸಾರ್ವಜನಿಕರ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಕುಗ್ಗುವ ಅಪಾಯವಿದೆ,” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಶಾಸನ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು, “ಸಾರ್ವಜನಿಕ ಸಮಾಲೋಚನೆಯಿಲ್ಲದೆ ಜಾರಿಗೆ ಬಂದ ಅನೇಕ ಕಾನೂನುಗಳು ನಂತರದಲ್ಲಿ ಅಸಮಾಧಾನಕ್ಕೆ ಕಾರಣವಾಗಿವೆ. ಜನರ ಅಭಿಪ್ರಾಯವನ್ನು ಪರಿಗಣಿಸಿದಾಗ ಮಾತ್ರ ವಾಸ್ತವಾಂಶದ ಆಳವಾದ ಅರಿವು ದೊರೆಯುತ್ತದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ವಿವಿಧ ಸಮಿತಿಗಳ ಶಿಫಾರಸುಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಪೂರ್ವ ಸಮಾಲೋಚನಾ ನೀತಿಯನ್ನು ಜಾರಿಗೆ ತಂದಿರುವುದು ಶ್ಲಾಘನೀಯ. ಇತರ ಇಲಾಖೆಗಳೂ ಇದನ್ನು ಅನುಸರಿಸಬೇಕು,” ಎಂದು ಉಲ್ಲೇಖಿಸಿದರು.

ಕರಡುಗಾರರ ಪಾತ್ರದ ಮಹತ್ವವನ್ನು ವಿವರಿಸಿದ ಖಾದರ್, “ಕರಡುಗಾರರು ಸಂವಿಧಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರಬೇಕು. ಭಾರತದಲ್ಲಿರುವ ಕೇಂದ್ರ ಮತ್ತು ರಾಜ್ಯ ಕಾಯಿದೆಗಳು, ನಿಯಮಗಳು ಹಾಗೂ ನ್ಯಾಯಾಂಗ ತೀರ್ಪುಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಶಾಸನ ಕಾರ್ಯವಿಧಾನಗಳ ಜ್ಞಾನವು ಕರಡು ರಚನೆಗೆ ಅಗತ್ಯ. ಕಾನೂನಿನ ಉದ್ದೇಶವನ್ನು ಸರಳ, ಸ್ಪಷ್ಟ ಹಾಗೂ ನಿಖರ ಭಾಷೆಯಲ್ಲಿ ಜನರಿಗೆ ತಲುಪಿಸುವುದು ಅವರ ಪ್ರಾಥಮಿಕ ಕರ್ತವ್ಯ,” ಎಂದು ಅವರು ಒತ್ತಿ ಹೇಳಿದರು.

“ವಿಭಾಗಗಳಿಂದ ಬರುವ ನಿರ್ದೇಶನಗಳು, ತಾಂತ್ರಿಕ ವರದಿಗಳು, ಸಾರ್ವಜನಿಕ ಅಭಿಪ್ರಾಯ ಇವುಗಳನ್ನೆಲ್ಲ ಕರಡುಗಾರರು ಅಧ್ಯಯನ ಮಾಡಬೇಕು. ನ್ಯಾಯಾಂಗ ತೀರ್ಪುಗಳ ತರ್ಕ ಹಾಗೂ ಮಾರ್ಗಸೂಚಿಗಳನ್ನು ಅರ್ಥೈಸಿ ಕರಡುಗಳಲ್ಲಿ ಅನ್ವಯಿಸಬೇಕು,” ಎಂದರು.

ಸಮಾಜದ ಬದಲಾವಣೆಯ ಹಿನ್ನೆಲೆಯಲ್ಲಿ ಹೊಸ ಕಾನೂನುಗಳ ಅಗತ್ಯ ಹೆಚ್ಚುತ್ತಿದೆ ಎಂದು ವಿವರಿಸಿದ ಖಾದರ್, “ಡಿಜಿಟಲ್ ಕ್ರಾಂತಿ, ಕೃತಕ ಬುದ್ಧಿಮತ್ತೆ, ಡೇಟಾ ರಕ್ಷಣೆ, ಸೈಬರ್ ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಇವುಗಳೆಲ್ಲ ಹೊಸ ಕಾನೂನುಗಳಿಗೆ ದಾರಿ ಮಾಡಿಕೊಡುತ್ತಿವೆ. ಇಂತಹ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಿರುವ ಕರಡುಗಾರರ ಅಗತ್ಯ ಇಂದಿನ ಕಾಲಘಟ್ಟದಲ್ಲಿ ಹೆಚ್ಚಾಗಿದೆ. ಆದ್ದರಿಂದ ಈ ತರಬೇತಿ ಕಾರ್ಯಕ್ರಮ ಗಳು ಅತ್ಯಂತ ಅವಶ್ಯಕ” ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಅವರು, “ಕರ್ನಾಟಕ ರಾಜ್ಯ ಕಾನೂನು ಆಯೋಗ, ‘ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆಗಳ ಸಂಸ್ಥೆ (KILPAR)’ ಹಾಗೂ ಇತ್ತೀಚೆಗೆ ಸ್ಥಾಪಿತವಾದ ‘ಕರ್ನಾಟಕ ಶಾಸಕಾಂಗ ಸಂಸ್ಥೆ’ ಶಾಸಕರ ಕಾರ್ಯಕ್ಷಮತೆ ಮತ್ತು ಕೌಶಲ್ಯಾಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿವೆ. ಇವು ಹೊಸ ಕಾನೂನು ರೂಪಿಸುವುದಲ್ಲದೆ, ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ತಿದ್ದುಪಡಿ ಸಲಹೆ ನೀಡುವ ಕಾರ್ಯದಲ್ಲಿ ತೊಡಗಿವೆ,” ಎಂದು ಹೇಳಿದರು.

“ಶಾಸನ ಕರಡುಗಳು ಸರಳ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ರೂಪಗೊಳ್ಳಬೇಕು. ತಿದ್ದುಪಡಿ ಮಸೂದೆಗಳಲ್ಲಿ ಸ್ಪಷ್ಟತೆ ಇರಬೇಕು ಮತ್ತು ಕಾನೂನು ಜಾರಿಗೆ ಬಂದ ಬಳಿಕ ಅದರ ಅನುಷ್ಠಾನ ನಿಯಮಗಳು ಸರಳವಾಗಿರಬೇಕು. ಮಂತ್ರಿಗಳು ಮಸೂದೆಗಳನ್ನು ಶಾಸಕರಿಗೆ ಅಧ್ಯಯನಕ್ಕೆ ಬೇಕಾದಷ್ಟು ಮುಂಚಿತವಾಗಿ ಒದಗಿಸಬೇಕು. ಇಂತಹ ತರಬೇತಿಗಳು ಪ್ರಜಾಪ್ರಭುತ್ವದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಹರಿಯಾಣ ವಿಧಾನಸಭೆಯ ಈ ಉಪಕ್ರಮ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾದರಿಯಾಗಲಿದೆ,” ಎಂದು ಸ್ಪೀಕರ್ ಯು ಟಿ ಖಾದರ್ ಅಭಿಪ್ರಾಯಪಟ್ಟರು.



share
ವಾರ್ತಾಭಾರತಿ
ವಾರ್ತಾಭಾರತಿ
Next Story
X