ಮಸಾಲಾ ಬಾಂಡ್ ಪ್ರಕರಣ: ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಈಡಿಯಿಂದ ನೋಟಿಸ್

ತಿರುವನಂತಪುರಂ: ಕೆಐಐಎಫ್‌ಬಿ ಮಸಾಲಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಸಿಎಂಗೆ ಜಾರಿ ನಿರ್ದೇಶನಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
2019ರಲ್ಲಿ ಕೇರಳ ಸರಕಾರ ಹೊರಡಿಸಿದ್ದ ಮಸಾಲಾ ಬಾಂಡ್ ನಲ್ಲಿ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಈ ನೋಟಿಸ್ 468 ಕೋಟಿ ರೂ.ಗಳ ವಹಿವಾಟಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ.
ಇದೇ ಪ್ರಕರಣದಲ್ಲಿ ಪಿಣರಾಯಿ ವಿಜಯನ್, ಅವರ ಖಾಸಗಿ ಕಾರ್ಯದರ್ಶಿ ಮತ್ತು ಮಾಜಿ ಹಣಕಾಸು ಸಚಿವ ಥಾಮಸ್ ಐಸಕ್ ಅವರಿಗೆ ಕೂಡ FEMA ಕಾಯ್ದೆಯಡಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
2019ರಲ್ಲಿ ಕೇರಳ ಸರಕಾರ ಮಸಾಲಾ ಬಾಂಡ್ ಹೊರಡಿಸಿತ್ತು. 2019ರಲ್ಲಿ ಇಂತಹ ಬಾಂಡ್‌ಗಳನ್ನು ಬಿಡುಗಡೆ ಮಾಡಿದ ಭಾರತದ ಮೊದಲ ರಾಜ್ಯ ಕೇರಳವಾಗಿದೆ.
Next Story





