ಈಡಿಯಿಂದ ಶಾಸಕ ಸೈಲ್ ರ 21 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಸತೀಶ್ ಸೈಲ್ | Photo: Instagram/satish_sail_
ಹೊಸದಿಲ್ಲಿ, ನ.8: ಕಬ್ಬಿಣದ ಆದಿರಿನ ಅಕ್ರಮ ರಫ್ತು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಈಡಿ)ವು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ 21 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ.
ನವೆಂಬರ್ 6ರಂದು ಜಾರಿನಿರ್ದೇಶನಾಲಯ(ಈಡಿ)ವು ಕಪ್ಪುಹಣ ಬಿಳುಪು ತಡೆ ಕಾಯ್ದೆ (ಪಿಎಂಎಲ್ಎ)ಯಡಿ ತಾತ್ಕಾಲಿಕ ಆದೇಶವೊಂದನ್ನು ಹೊರಡಿಸಿ, ಸತೀಶ್ ಸೈಲ್ ಅವರಿಗೆ ಸೇರಿದ ಸೊತ್ತುಗಳಿಗೆ ಮುಟ್ಟುಗೋಲು ಹಾಕಿದೆ. ಈ ಸೊತ್ತುಗಳು ಸೈಲ್ ಅವರ ಗೋವಾ ಮೂಲದ ಶ್ರೀಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ (ಎಸ್ಎಂಪಿಎಲ್) ಕಂಪೆನಿಗೆ ಸೇರಿದ್ದಾಗಿವೆ ಎಂದು ಜಾರಿ ನಿರ್ದೇಶನಾಲಯ(ಈಡಿ) ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ಸೈಲ್ ಅವರನ್ನು ಈ.ಡಿ. ಸೆಪ್ಟೆಂಬರ್ ನಲ್ಲಿ ಬಂಧಿಸಿತ್ತು. ವೈದ್ಯಕೀಯ ನೆಲೆಯಲ್ಲಿ ಆತನಿಗೆ ಮಧ್ಯಂತರ ಜಾಮೀನು ದೊರೆತಿತ್ತು. ಶುಕ್ರವಾರ ವಿಶೇಷ ಕಪ್ಪುಹಣ ಬಿಳುಪು ತಡೆ ನ್ಯಾಯಾಲಯ(ಈಡಿ)ವು ಈ ಜಾಮೀನನ್ನು ರದ್ದುಪಡಿಸಿತ್ತು.





