ಏಕನಾಥ್ ಶಿಂಧೆ ಎಕ್ಸ್ ಖಾತೆ ಹ್ಯಾಕ್!

ಏಕನಾಥ್ ಶಿಂಧೆ (Photo: PTI)
ಪಾಕಿಸ್ತಾನ, ಟರ್ಕಿ ಧ್ವಜದ ಚಿತ್ರಗಳನ್ನು ಪೋಸ್ಟ್ ಮಾಡಿದ ಹ್ಯಾಕರ್ ಗಳು
ಮುಂಬೈ: ರವಿವಾರ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಎಕ್ಸ್ ಖಾತೆ ಕೆಲ ಕಾಲ ಹ್ಯಾಕ್ ಆಗಿದ್ದು, ಹ್ಯಾಕರ್ ಗಳು ಅವರ ಖಾತೆಯಲ್ಲಿ ಪಾಕಿಸ್ತಾನ, ಟರ್ಕಿ ಧ್ವಜದ ಚಿತ್ರಗಳನ್ನು ಪೋಸ್ಟ್ ಮಾಡಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಇಂದು ಏಶ್ಯಕಪ್ ನಲ್ಲಿ ಪರಸ್ಪರ ಸೆಣಸಾಡಲಿರುವಾಗಲೇ ಹ್ಯಾಕರ್ ಗಳು ಪಾಕಿಸ್ತಾನ ಹಾಗೂ ಟರ್ಕಿಯ ಧ್ವಜಗಳನ್ನು ಪೋಸ್ಟ್ ಮಾಡಿದ್ದಾರೆ.
“ನಾವು ಕೂಡಲೇ ಈ ಕುರಿತು ಸೈಬರ್ ಅಪರಾಧ ಪೊಲೀಸರಿಗೆ ಮಾಹಿತಿ ನೀಡಿದೆವು. ಉಪ ಮುಖ್ಯಮಂತ್ರಿಗಳ ಎಕ್ಸ್ ಖಾತೆಯ ಮೇಲುಸ್ತುವಾರಿ ಹೊತ್ತಿರುವ ನಮ್ಮ ತಂಡವು ನಂತರ, ಅವರ ಖಾತೆಯನ್ನು ಮರುಸ್ಥಾಪಿಸಿತು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಕನಾಥ್ ಶಿಂದೆ ಅವರ ಖಾತೆಯನ್ನು ಮರುಸ್ಥಾಪಿಸಲು ಸುಮಾರು 30ರಿಂದ 45 ನಿಮಿಷಗಳ ಕಾಲ ತಗುಲಿತು ಎಂದೂ ಅವರು ಹೇಳಿದ್ದಾರೆ.
Next Story





