ಭಯಭೀತ ಕಿರಿಯ ಕಾರ್ಮಿಕರಿಗೆ ಭರವಸೆ ತುಂಬಿದ ಹಿರಿಯ ಗಬ್ಬರ್ ಸಿಂಗ್

ಗಬ್ಬರ್ ಸಿಂಗ್ ನೇಗಿ | Photo: PTI
ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯಾರ ಸುರಂಗಮಾರ್ಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು ಭಯ ಹಾಗೂ ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದ ಕ್ಷಣಗಳಲ್ಲಿ ಅವರೆಲ್ಲರಿಗಿಂತ ಹಿರಿಯವರಾದ ಗಬ್ಬರ್ ಸಿಂಗ್ ನೇಗಿಯವರ ದಿಟ್ಟ ನಾಯಕತ್ವವು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತ್ತು.
ಕುಸಿದುಬಿದ್ದ ಸುರಂಗಮಾರ್ಗದೊಳಗೆ 400ಕ್ಕೂ ಅಧಿಕ ತಾಸುಗಳ ಕಾಲ ಸಿಕ್ಕಿಹಾಕಿಕೊಂಡಿದ ತನ್ನ ಸಹದ್ಯೋಗಿಗಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಕ್ರಿಯವಾಗಿರಲು ಗಬ್ಬರ್ ಸಿಂಗ್ ಅವರು ಯೋಗ ಹಾಗೂ ಧ್ಯಾನವನ್ನು ಕಲಿಸಿದರು. ಅವರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸುವ ತನ್ನ ಬದ್ಧತೆಯನ್ನು ಒತ್ತಿ ಹೇಳಿದ ಅವರು, ಎಲ್ಲರಿಗಿಂತ ಕೊನೆಗೆ ನಾನು ರಕ್ಷಿಸಲ್ಪಡುವವನಾಗುತ್ತೇನೆ ಎಂದು ಹೇಳಿದ್ದರು.
Next Story





