ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದ ಎಕ್ಸ್‌ಪರ್ಟೈಸ್‌ನ ಸಿಒಒ ಕೆ.ಎಸ್. ಶೇಖ್ ಕರ್ನಿರೆ

ಹೊಸದಿಲ್ಲಿ: ಸೌದಿ ಅರೇಬಿಯಾದ ಪ್ರಮುಖ ಕೈಗಾರಿಕಾ ಸಂಸ್ಥೆ ಎಕ್ಸ್‌ಪರ್ಟೈಸ್‌ನ ಸಿಒಒ ಕೆ.ಎಸ್. ಶೇಖ್ ಕರ್ನಿರೆ, ವಯನಾಡಿನ ಕಾಂಗ್ರೆಸ್ ಸಂಸದೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ದಿಲ್ಲಿಯಲ್ಲಿ ಇತ್ತೀಚೆಗೆ ಭೇಟಿಯಾದರು.
ಈ ಸಂದರ್ಭ ಅವರು ಔದ್ಯಮಿಕ ಪ್ರಗತಿ ಮತ್ತು ಬೆಳವಣಿಗೆ ಕುರಿತು ಚರ್ಚೆ ನಡೆಸಿದರು.
ಭೇಟಿಯ ವೇಳೆ ಅವರು ಸಮಾಜದ ಅಭಿವೃದ್ಧಿ, ತಂತ್ರಜ್ಞಾನ ಅನುಷ್ಠಾನ ಮತ್ತು ಉದ್ಯಮ ವಿಸ್ತರಣೆಯ ಕುರಿತಂತೆ ತಾತ್ಕಾಲಿಕ ಹಾಗೂ ದೀರ್ಘಾವಧಿಯ ಯೋಜನೆಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ದೇವಿಪ್ರಿಯಾ ರಾಯ್ ಬರೆದ ಮತ್ತು ಪ್ರಿಯಾ ಕುರಿಯನ್ ಚಿತ್ರಿಸಿದ “ಇಂದಿರಾ” ಪುಸ್ತಕವನ್ನು ಕರ್ನಿರೆ ಅವರಿಗೆ ಉಡುಗೊರೆಯಾಗಿ ನೀಡಿದರು.
ದಕ್ಷಿಣ ಕನ್ನಡ ಮೂಲದ ಶೇಖ್ ಕರ್ನಿರೆ, ತಮ್ಮ ಕನಸುಗಳ ಬೆನ್ನೇರಿ ಸೌದಿ ಅರೇಬಿಯಾಗೆ ತೆರಳಿ ವೃತ್ತಿಪರವಾಗಿ ಅದ್ಭುತ ಯಶಸ್ಸು ಸಾಧಿಸಿದವರು. 1999ರಲ್ಲಿ ಸ್ಥಾಪಿತವಾದ ಎಕ್ಸ್‌ಪರ್ಟೈಸ್, ಇಂದು ಮಧ್ಯಪ್ರಾಚ್ಯದ ಪ್ರಮುಖ ಕೈಗಾರಿಕಾ ಸಂಸ್ಥೆಯಾಗಿ ಬೆಳೆಯುತ್ತಿದ್ದು, ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್, ನೀರು ಸಂಸ್ಕರಣೆ ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆಗಳನ್ನು ಒದಗಿಸುತ್ತಿದೆ.







