ಉತ್ತರ ಪ್ರದೇಶದ ಟಯರ್ ಕಾರ್ಖಾನೆಯಲ್ಲಿ ಸ್ಫೋಟ | ಇಬ್ಬರು ಸಾವು, ಮೂವರಿಗೆ ಗಾಯ

ಸಾಂದರ್ಭಿಕ ಚಿತ್ರ | Photo: X
ಮೀರತ್: ಇಲ್ಲಿನ ಇಂಚೋಲಿಯಲ್ಲಿರುವ ಟಯರ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಉದ್ಯೋಗಿಗಳು ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಈ ಘಟನೆ ಇಂಚೋಳಿಯ ಫಿಟ್ಕಾರಿ ಗ್ರಾಮದಲ್ಲಿ ಮುಂಜಾನೆ 5 ಗಂಟೆಗೆ ನಡೆದಿದೆ. ಘಟನೆಯಲ್ಲಿ ಶಂಕರ್ (30) ಹಾಗೂ ಪರ್ವೀನ್(22) ಮೃತಪಟ್ಟಿದ್ದಾರೆ. ಗಾಯಗೊಂಡ ಇತರ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.
ಎಲ್ಲಾ ಐವರು ಮೀರತ್ ಜಿಲ್ಲೆಯ ಇಂಚೋಲಿಯ ಕಿಶೋರ್ಪುರ ಗ್ರಾಮದ ನಿವಾಸಿಗಳು. ಈ ಕಾರ್ಖಾನೆ ಬಳಸಿದ ಟಯರ್ಗಳಿಂದ ತೈಲ ಹಾಗೂ ವಯರ್ಗಳನ್ನು ತೆಗೆಯುತ್ತಿತ್ತು.
ತೀವ್ರ ಒತ್ತಡದಿಂದ ಬಾಯ್ಲರ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮುುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





