ದಿಲ್ಲಿಯಲ್ಲಿ ಸ್ಪೋಟ ಪ್ರಕರಣ | ನ.13ರವರೆಗೆ ಪ್ರವಾಸಿಗರಿಗೆ ಕೆಂಪುಕೋಟೆ ಬಂದ್

Photo: PTI
ಹೊಸದಿಲ್ಲಿ,ನ.11: ಭೀಕರ್ ಕಾರ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ದಿಲ್ಲಿಯ ಕೆಂಪುಕೋಟೆ ಪ್ರದೇಶವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನವೆಂಬರ್ 11ರಿಂದ 13ರವರೆಗೆ ಪ್ರವಾಸಿಗರಿಗೆ ಮುಚ್ಚಿದೆ.
ಐತಿಹಾಸಿಕ ಕೆಂಪುಕೋಟೆ ಸ್ಮಾರಕವನ್ನು ತಾತ್ಕಾಲಿಕವಾಗಿ ಮುಚ್ಚುಗಡೆಗೊಳಿಸುವಂತೆ ದಿಲ್ಲಿಯ ಕೋಟ್ವಾಲಿ ಠಾಣಾ ಪೊಲೀಸರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಪತ್ರ ಬರೆದು ಮನವಿ ಮಾಡಿತ್ತು.
ಕಾರ್ ಸ್ಫೋಟದ ಘಟನೆ ನಡೆದ ಕೆಂಪುಕೋಟೆ ಪ್ರದೇಶದಲ್ಲಿ ಸ್ಥಳದ ಮಹಜರು ಪ್ರಗತಿಯಲ್ಲಿದೆ. ಆದುದರಿಂದ ಕೆಂಪುಕೋಟೆಯನ್ನು ನ.11ರಿಂದ 13ರವರೆಗೆ ಮೂರು ದಿನಗಳ ಕಾಲ ಮುಚ್ಚುಗಡೆಗೊಳಿಸಬೇಕೆಂದು ಪತ್ರದಲ್ಲಿ ಕೋರಲಾಗಿತ್ತು.
Next Story





