ಫತೇಪುರ | 2ಗೂಡ್ಸ್ ರೈಲುಗಳ ಡಿಕ್ಕಿ ರೈಲು ಸಂಚಾರ ಅಸ್ತವ್ಯಸ್ತ

PC : PTI
ಹೊಸದಿಲ್ಲಿ: ಉತ್ತರಪ್ರದೇಶದ ಫತೇಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಎರಡು ಗೂಡ್ಸ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದು, ಭಾರತೀಯ ರೈಲ್ವೆ ಇಲಾಖೆಯ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ.
ಫತೇಪುರ ಜಿಲ್ಲೆಯ ಪಾಂಭಿಪುರದಲ್ಲಿ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅವಘಡದ ತೀವ್ರತೆಯಿಂದಾಗಿ ಗೂಡ್ಸ್ ರೈಲಿನ ಗಾರ್ಡ್ ಕೋಚ್ ಹಾಗೂ ಎಂಜಿನ್ ಹಳಿತಪ್ಪಿ ಅವಘಡ ಸಂಭವಿಸಿದೆ.
ಅಪಘಾತದಿಂದಾಗಿ ಈ ರೈಲ್ವೆಮಾರ್ಗವಾಗಿ ಚಲಿಸುವ ರೈಲುಗಳ ಸಂಚಾರದಲ್ಲಿ ಅಡಚಣೆಯುಂಟಾಗಿದೆ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
Next Story