ಅನುಮತಿಯಿಲ್ಲದೆ ಸೇತುವೆ ಉದ್ಘಾಟನೆ: ಆದಿತ್ಯ ಠಾಕ್ರೆ ಸೇರಿದಂತೆ ಉದ್ಧವ್ ಬಣದ ನಾಯಕರ ವಿರುದ್ಧ FIR

ಆದಿತ್ಯ ಠಾಕ್ರೆ (PTI)
ಮುಂಬೈ: ನಿರ್ಮಾಣ ಹಂತದ ಸೇತುವೆಯನ್ನು ಅಕ್ರಮವಾಗಿ ಉದ್ಘಾಟಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆದಿತ್ಯ ಠಾಕ್ರೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂಚಾರಕ್ಕೆ ಸಂಪೂರ್ಣವಾಗಿ ಸಿದ್ಧವಾಗಿಲ್ಲದಿದ್ದರೂ ಲೋವರ್ ಪರೇಲ್ ಸೇತುವೆಯನ್ನು ಬಿಎಂಸಿಯ ಅನುಮತಿಯಿಲ್ಲದೆ ಉದ್ಘಾಟನೆ ಮಾಡಲಾಗಿದೆ ಎಂದು ಬಿಎಂಸಿ ಠಾಕ್ರೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಉದ್ಧವ್ ಠಾಕ್ರೆ ಬಣದ ನಾಯಕರಾದ ಆದಿತ್ಯ ಠಾಕ್ರೆ, ಸುನೀಲ್ ಶಿಂಧೆ ಮತ್ತು ಸಚಿನ್ ಅಹಿರ್ ವಿರುದ್ಧ ಮುಂಬೈನ ಎನ್ಎಂ ಜೋಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸರು ಐಪಿಸಿ ಸೆಕ್ಷನ್ 143, 149, 326 ಮತ್ತು 447 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆದಿತ್ಯ ಠಾಕ್ರೆ ಮತ್ತು ಇತರ ನಾಯಕರು ನವೆಂಬರ್ 16 ರ ರಾತ್ರಿ ಸೇತುವೆಯನ್ನು ಅಕ್ರಮವಾಗಿ ಉದ್ಘಾಟಿಸಿದ್ದಾರೆ. ಸೇತುವೆಯ ಕೆಲಸ ಇನ್ನೂ ಬಾಕಿ ಉಳಿದಿದ್ದರೂ, ಸೇತುವೆಯನ್ನು ತೆರೆಯಲಾಗಿದೆ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ.
ಆದಿತ್ಯ ಠಾಕ್ರೆ, ಸುನೀಲ್ ಶಿಂಧೆ, ಸಚಿನ್ ಅಹಿರ್, ಮಾಜಿ ಮೇಯರ್ ಕಿಶೋರಿ ಪೆಡ್ನೇಕರ್ ಮತ್ತು ಮಾಜಿ ಮೇಯರ್ ಸ್ನೇಹಲ್ ಅಂಬೇಕರ್ ಅವರು 15 ರಿಂದ 20 ಅಪರಿಚಿತ ಕಾರ್ಯಕರ್ತರೊಂದಿಗೆ ಸೇತುವೆಯನ್ನು ಅಕ್ರಮವಾಗಿ ಉದ್ಘಾಟಿಸಿದ್ದರು. ಬಿಎಂಸಿಯಿಂದ ಅನುಮತಿ ಪಡೆಯದೆ ಸೇತುವೆಯನ್ನು ತೆರೆಯಲಾಗಿದ್ದು, ಸೇತುವೆ ಸಂಚಾರಕ್ಕೆ ಸಂಪೂರ್ಣವಾಗಿ ಸಿದ್ಧವಾಗಿರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.







