ಪತ್ರಕರ್ತೆಯ ಬಗ್ಗೆ ಆಕ್ಷೇಪಾರ್ಹ ಫೇಸ್ ಬುಕ್ ಪೋಸ್ಟ್ ಮಾಡಿದ ಮಾಜಿ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ: ಸಾಮಾಜಿಕ ಜಾಲತಾಣದ ಮೂಲಕ ಹಿರಿಯ ಟಿವಿ ಪತ್ರಕರ್ತೆಯ ಕುರಿತಂತೆ ಅಶ್ಲೀಲ ಪೋಸ್ಟ್ ಮಾಡಿದ ಮಾಜಿ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪತ್ರಕರ್ತೆಯ ವಿಡಂಬನಾತ್ಮಕ ಸುದ್ದಿ ವಿಶ್ಲೇಷಣೆಯ ಟಿವಿ ಶೋ ಅನ್ನು ಟೀಕಿಸಿ ಮಾಜಿ ಉಪ ನ್ಯಾಯಾಧೀಶ ಎಸ್ ಸುದೀಪ್ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ.
ಸುದೀಪ್ ಅವರು ಮಲಯಾಳಂ ಭಾಷೆಯಲ್ಲಿ ಬರೆದಿರುವ ಫೇಸ್ಬುಕ್ ಪೋಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಅವರ ವಿರುದ್ಧ ಕೆಂಟೋನ್ಮೆಂಟ್ ಪೊಲೀಸರು ಐಪಿಸಿ ಸೆಕ್ಷನ್ 354ಎ(iv) ಮತ್ತು ಐಟಿ ಕಾಯಿದೆಯ ಸೆಕ್ಷನ್ 67 ಅನ್ವಯ ಪ್ರಕರಣ ದಾಖಲಿಸಿದ್ದಾರೆ. ತನಿಖಾಧಿಕಾರಿ ಮುಂದೆ ಮುಂದಿನ ವಾರ ಹಾಜರಾಗುವಂತೆಯೂ ಆರೋಪಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





