ಉತ್ತರ ಪ್ರದೇಶ: ಫೆಲೆಸ್ತೀನ್ ಧ್ವಜದ ಚಿತ್ರವಿದ್ದ ಟಿ-ಶರ್ಟ್ ಧರಿಸಿದ್ದಕ್ಕಾಗಿ ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ (credit:businesstoday.in)
ದೇವರಿಯಾ: ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ಮೊಹರಂ ಪ್ರಯುಕ್ತ ನಡೆದ ತಾಝಿಯಾ ಮೆರವಣಿಗೆ ಸಂದರ್ಭದಲ್ಲಿ ಫೆಲೆಸ್ತೀನ್ ಧ್ವಜದ ಚಿತ್ರವಿದ್ದ ಟಿ-ಶರ್ಟ್ಗಳನ್ನು ಧರಿಸಿದ್ದಕ್ಕಾಗಿ ನಾಲ್ವರು ಯುವಕರನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಬಗೌಚಘಾಟ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ಈ ಘಟನೆ ನಡೆದಿದ್ದು, ಮೆರವಣಿಗೆಯ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಫೆಲೆಸ್ತೀನ್ ಧ್ವಜವನ್ನು ಸಾಂಕೇತಿಕವಾಗಿ ಪ್ರತಿನಿಧಿಸಿರುವ ಟಿ-ಶರ್ಟ್ಗಳನ್ನು ಧರಿಸಿರುವ ಯುವಕರ ಗುಂಪೊಂದನ್ನು ಚಿತ್ರವು ತೋರಿಸಿದೆ.
ಸ್ಥಳೀಯ ನಿವಾಸಿಗಳಾದ ಯುವಕರನ್ನು ಸೋಮವಾರ ಬಂಧಿಸಿರುವ ಪೋಲಿಸರು ಟಿ-ಶರ್ಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಗುರುತುಗಳನ್ನು ಬಹಿರಂಗಗೊಳಿಸಲಾಗಿಲ್ಲ.
ಈ ಬಗ್ಗೆ ಪೋಲಿಸರು ವಿವರವಾದ ತನಿಖೆಯನ್ನು ನಡೆಸುತ್ತಿದ್ದಾರೆ.
Next Story





