Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ...

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯಿಂದ ಹಣ ವಂಚನೆ

ದಿಲ್ಲಿಯಲ್ಲಿ ಡೇಟಿಂಗ್ ಆ್ಯಪ್ ಬ್ಲಂಡರ್!

ವಾರ್ತಾಭಾರತಿವಾರ್ತಾಭಾರತಿ11 Nov 2023 10:10 PM IST
share
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯಿಂದ ಹಣ ವಂಚನೆ

ದಿಲ್ಲಿ : ಬಂಬಲ್ ಡೇಟಿಂಗ್ ಆ್ಯಪ್ ಮೂಲಕ ತಾನು ಪರಿಚಯವಾದ ಮಹಿಳೆಯೊಂದಿಗೆ ರಜೌರಿ ಗಾರ್ಡನ್‌ನಲ್ಲಿರುವ ಬಾರ್ಗೆ ತೆರಳಿದ್ದ ತನಗೆ 15 ಸಾವಿರ ರೂ.ಗೂ ಅಧಿಕ ಮೊತ್ತದ ಬಿಲ್‌ಪಾವತಿಸುವಂತೆ ಮಾಡಿ ಮೋಸಗೊಳಿಸಲಾಗಿದೆಯೆಂದು ದಿಲ್ಲಿಯ ಪತ್ರಕರ್ತರೊಬ್ಬರು ಆಪಾದಿಸಿದ್ದಾರೆ.

ಪತ್ರಕರ್ತರಾದ ಅರ್ಚಿತ್ ಗುಪ್ತಾ ಅವರು ಯುವತಿಯ ಜೊತೆ ಬಾರ್‌ಗೆ ತೆರಳಿದ್ದು, ಆಕೆಗಾಗಿ ಪಾನೀಯಗಳನ್ನು ಆರ್ಡರ್ ಮಾಡಿದ್ದರು. ಆದರೆ 15,886 ರೂ. ಮೊತ್ತದ ಬಿಲ್ ಬಂದಾಗ ಅರ್ಚಿತ್ ಹೌಹಾರಿದ್ದರು. ಆದರೂ ಒಲ್ಲದ ಮನಸ್ಸಿನಿಂದ ಹಣ ಪಾವತಿಸಿದರು. ಬಳಿಕ ತಾನು ಸಹೋದರ ಜೊತೆ ತೆರಳುತ್ತಿರುವುದಾಗಿ ಮಹಿಳೆಯು ಸ್ಥಳದಿಂದ ನಿರ್ಗಮಿಸಿದ ಆನಂತರ ತಾನು ಮೋಸಹೋಗಿರುವುದು ಗುಪ್ತಾಗೆ ಮನವರಿಕೆಯಾಯಿತು. ಆ ಬಳಿಕ ಮಹಿಳೆಗೆ ತಾನು ಕರೆ ಮಾಡಿದ ಹೊರತಾಗಿಯೂ ಆಕೆ ಅವನ್ನು ಸ್ವೀಕರಿಸದೆ ಇದ್ದುದು ತನ್ನ ಸಂದೇಹವನ್ನು ಬಲಪಡಿಸಿತು ಎಂದು ಗುಪ್ತಾ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.

‘‘ಆಕೆ ನನ್ನನ್ನು ಬಾರ್‌ಗೆ ಕರೆದೊಯ್ದಳು. ಆಕೆಗಾಗಿ ಕೆಲವು ಡ್ರಿಂಕ್‌ಗಳನ್ನು ಆರ್ಡರ್ ಮಾಡಿದ್ದಳು. ನಾನು ಮದ್ಯಸೇವಿಸುವುದಿಲ್ಲ. ಹೀಗಾಗಿ ನಾನು ರೆಡ್‌ಬುಲ್ ಲಘುಪಾನೀಯವನ್ನು ಆರ್ಡರ್ ಮಾಡಿದೆ. ಒಂದು ಹುಕ್ಕಾ, 2-3 ಗ್ಲಾಸ್ ವೈನ್, ವೊಡ್ಕಾ ಶಾಟ್, ಚಿಕನ್ ಟಿಕ್ಕಾ ಹಾಗೂ ಒಂದು ನೀರಿನ ಬಾಟಲ್ ಸೇರಿ ಒಟ್ಟು 15,886 ರೂ.ಬಿಲ್ ಬಂದಿತ್ತು ಎಂದು ಗುಪ್ತಾ ಟ್ವೀಟ್ ಮಾಡಿದ್ದಾರೆ.

ಬಿಲ್ ನೋಡಿ ನನಗೆ ಶಾಕ್ ಆಯಿತು. ಆದರೂ ನಾನು ಬಿಲ್ ಪಾವತಿಸಿದೆ. ಸ್ಥಳವನ್ನು ತೊರೆಯುವ ಮುನ್ನ ನಾನು ವಾಶ್‌ರೂಮ್‌ಗೆ ತೆರಳಿದ್ದೆ. ವಾಪಾಸಾಗುವಾಗ ನಾನು ಇರಿಸಿದ್ದ ಬಿಲ್ ಇರಲಿಲ್ಲ’’ ಎಂದು ಆತ ಹೇಳಿಕೊಂಡಿದ್ದಾರೆ.

ತನ್ನನ್ನು ಕರೆದೊಯ್ಯಲು ಸಹೋದರ ಬರುತ್ತಿದ್ದಾನೆ. ಈಗಲೇ ತೆರಳಬೇಕಾಗಿದೆಯೆಂದು ಆಕೆ ಹೇಳಿದಳು. ಮನೆಗೆ ವಾಪಾಸಾದಾಗ ಇದೊಂದು ಮಹಾಮೋಸವೆಂಬುದಾಗಿ ನನಗೆ ಅರಿವಾಯಿತು. ಆಕೆ ನಾಪತ್ತೆಯಾಗಿದ್ದು, ತನ್ನ ಕರೆಗಳನ್ನು ಕೂಡಾ ಸ್ವೀಕರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ದಿಲ್ಲಿಯ ಸೈಬರ್ ಪೊಲೀಸ್ ದಳಕ್ಕೆ ದೂರು ನೀಡಿದಾಗ ಅದರ ಸಹಾಯವಾಣಿ ಸಂಖ್ಯೆ 1930 ಕಾರ್ಯನಿರ್ವಹಿಸದೆ ಇರುವುದು ಗೊತ್ತಾಯಿತು. ಬಳಿಕ ತಾನು ದಿಲ್ಲಿ ಪೊಲೀಸರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವುದಾಗಿ ಗುಪ್ತಾ ಎಕ್ಸ್‌ನಲ್ಲಿ ಹೇಳಿದ್ದಾರೆ.

ದಿಲ್ಲಿಯ ಕೆಫೆಗಳು ಹಾಗೂ ಕ್ಲಬ್‌ಗಳಲ್ಲಿ ವ್ಯಾಪಕ ವಂಚನೆಗಳ ಪ್ರಕರಣಗಳು ನಡೆಯುತ್ತಿವೆಯೆಂದು ಅವರು ಹೇಳಿದ್ದಾರೆ.

ಕೇವಲ ಒಂದು ತಿಂಗಳ ಹಿಂದೆ ದಿಲ್ಲಿಯ ಇನ್ನೊಬ್ಬ ವ್ಯಕ್ತಿ ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಪರಿಚವಾದ ಮಹಿಳೆಯಿಂದ 14 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದರು. ಗುಪ್ತಾ ತನ್ನ ಡೇಟಿಂಗ್ ಗೆಳತಿಯನ್ನು ಭೇಟಿಯಾದ ರಜೌರಿ ಗಾರ್ಡನ್ ಪ್ರದೇಶದಲ್ಲಿಯೇ ಆತ ಕೂಡಾ ಆ ಮಹಿಳೆಯನ್ನು ಭೇಟಿಯಾಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X