ದಿಲ್ಲಿಗೆ ಬಂದಿಳಿದ ಅನ್ಮೋಲ್ ಬಿಷ್ಣೋಯಿ : ಎನ್ಐಎ ವಶಕ್ಕೆ

Photo credit: indiatoday.com
ಹೊಸದಿಲ್ಲಿ: ಎನ್ಸಿಪಿ ಮುಖಂಡ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅನ್ಮೋಲ್ ಬಿಷ್ಣೋಯಿ ಅಮೆರಿಕದಿಂದ ಗಡೀಪಾರು ಹಿನ್ನೆಲೆ ಬುಧವಾರ ದಿಲ್ಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ.
ಭಾರತಕ್ಕೆ ಬಂದಿಳಿದ ಅನ್ಮೋಲ್ ಬಿಷ್ಣೋಯಿಯನ್ನು ಎನ್ಐಎ ಬಂಧಿಸಿದೆ. 2022ರಿಂದ ಅನ್ಮೋಲ್ ಬಿಷ್ಣೋಯಿ ತಲೆಮರೆಸಿಕೊಂಡಿದ್ದ.
ಇದಕ್ಕೂ ಮೊದಲು ಅಮೆರಿಕದಿಂದ ಗಡೀಪಾರು ಮಾಡಲಾಗಿರುವ 200 ಮಂದಿ ಅಕ್ರಮ ವಲಸಿಗಳರನ್ನು ಹೊತ್ತ ವಿಶೇಷ ವಿಮಾನದಲ್ಲಿ ಬಿಷ್ಣೋಯಿ ಕೂಡಾ ಇದ್ದಾನೆ ಎಂದು ಮೂಲಗಳು ತಿಳಿಸಿತ್ತು.
Next Story





