ಜಿಡಿಆರ್ ಅಕ್ರಮ ಪ್ರಕರಣ : ಅರುಣ ಪಂಚಾರಿಯಾರ ಬ್ಯಾಂಕ್, ಡಿಮ್ಯಾಟ್ ಖಾತೆ ಜಪ್ತಿಗೆ ಆದೇಶ

Photo Credit: The Hindu
ಹೊಸದಿಲ್ಲಿ: ಮಾರುಕಟ್ಟೆ ಸಲಹೆಗಾರ ಅರುಣ ಪಂಚಾರಿಯಾರಿಂದ ಬರಬೇಕಿರುವ 26.25 ಕೋಟಿ ರೂ.ಗಳ ಬಾಕಿಯನ್ನು ವಸೂಲು ಮಾಡಲು ಲಾಕರ್ ಗಳು ಸೇರಿದಂತೆ ಅವರ ಬ್ಯಾಂಕ್ ಖಾತೆಗಳು, ಶೇರುಗಳು ಮತ್ತು ಮ್ಯೂಚುವಲ್ ಫಂಡ್ ಹಿಡುವಳಿಗಳ ಜಪ್ತಿಗೆ ಸೆಬಿ ಆದೇಶಿಸಿದೆ.
ಹಿರಣ ಆರ್ಗೊಕೆಮ್ ಲಿ.ನ ಜಾಗತಿಕ ಠೇವಣಿ ರಸೀದಿ (ಜಿಡಿಆರ್)ಗಳ ವಿತರಣೆಯಲ್ಲಿ ಅಕ್ರಮವೆಸಗಿದ್ದಕ್ಕಾಗಿ ಸೆಬಿ ಪಂಚಾರಿಯಾಗೆ ದಂಡವನ್ನು ವಿಧಿಸಿತ್ತು.
ಪಂಚಾರಿಯಾರ ಖಾತೆಗಳಿಂದ ಹಣವನ್ನುಹಿಂದೆಗೆದುಕೊಳ್ಳಲು ಅವಕಾಶ ನೀಡದಂತೆ, ಆದರೆ ಹಣವನ್ನು ಜಮಾ ಮಾಡಲು ಅವಕಾಶ ನೀಡುವಂತೆ ಸೆಬಿ ಎಲ್ಲ ಬ್ಯಾಂಕಗಳು, ಡಿಪೋಸಿಟರಿಗಳು ಮತ್ತು ಮ್ಯೂಚ್ಯುವಲ್ ಫಂಡ್ಗಳಿಗೆ ಸೆಬಿ ಸೂಚಿಸಿದೆ.
Next Story





