Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಫ್ಯಾಕ್ಟ್‌ಚೆಕ್‌: #GetOutStalin' ಎಂಬ...

ಫ್ಯಾಕ್ಟ್‌ಚೆಕ್‌: #GetOutStalin' ಎಂಬ ಬ್ಯಾನರ್ ಹಿಡಿದು ಪ್ರತಿಭಟಿಸುತ್ತಿರುವ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ

telugupost.comtelugupost.com10 March 2025 5:10 PM IST
share
ಫ್ಯಾಕ್ಟ್‌ಚೆಕ್‌: #GetOutStalin ಎಂಬ ಬ್ಯಾನರ್ ಹಿಡಿದು ಪ್ರತಿಭಟಿಸುತ್ತಿರುವ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ

​ಕೇಂದ್ರ ಸರ್ಕಾರ ತಮಿಳುನಾಡಿಗೆ 10,000 ಕೋಟಿ ರೂಪಾಯಿ ಕೊಟ್ಟರೂ ನಾವು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲ್ಲ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಮತ್ತು ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ವಿವಾದ ತೀವ್ರಗೊಂಡಿದೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಭಾಷಾ ವಿವಾದದ ಮಧ್ಯೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಶಾಲಾ ವಿದ್ಯಾರ್ಥಿಗಳು "ಗೆಟ್ ಔಟ್ ಸ್ಟಾಲಿನ್" ಎಂದು ಬರೆದ ಪೋಸ್ಟರ್‌ಗಳೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.

ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ, ರಾಜ್ಯದ ಪಾಲು ನಿಧಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ ನಂತರ ಭುಗಿಲೆದ್ದ ಸಾಮಾಜಿಕ ಮಾಧ್ಯಮ ಯುದ್ಧದ ಮಧ್ಯೆ ಈ ಚಿತ್ರವು ಬೆಳಕಿಗೆ ಬಂದಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಬಿಜೆಪಿ ರಾಜ್ಯ ಮುಖ್ಯಸ್ಥ ಕೆ.ಅಣ್ಣಾಮಲೈ #GetOutStalin ಅಭಿಯಾನವನ್ನು ಪ್ರಾರಂಭಿಸಿದರು, ಆನ್‌ಲೈನ್ ಸ್ಟಾಲಿನ್ ವಿರೋಧಿ ಭಾವನೆಗಳು 2026 ರ ವಿಧಾನಸಭಾ ಚುನಾವಣೆಯಲ್ಲಿ ನಿಜವಾದ ಮತಗಳಾಗಿ ಪರಿವರ್ತನೆಯಾಗುತ್ತವೆ ಮತ್ತು ಇದು ಸ್ಟಾಲಿನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು.

ಫೆಬ್ರವರಿ 21, 2025ರಂದು ಎಕ್ಸ್‌ ಖಾತೆದಾರರೊಬ್ಬರು ವಿದ್ಯಾರ್ಥಿಗಳು ʼALL Indians are Brothers and Sisters. Stop Noth vs South divide #GetOutStalinʼ ಎಂಬ ಬ್ಯಾನರ್‌ನ್ನು ಹಿಡಿದಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆಯಾಗಿ ʼRepost and Comment if you agree with these Kids. #GetOutStalinʼ ಎಂದು ಬರೆದು ಪೊಸ್ಟ್‌ ಮಾಡಿರುವುದನ್ನು ನೋಡಬಹುದು.

Repost and Comment if you agree with these Kids .#GetOutStalin pic.twitter.com/5uTIjc0Xs6

— Ashley (Molly) (@theAshleyMolly) February 21, 2025

ವೈರಲ್‌ ಆದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು



ಫೆಬ್ರವರಿ 22, 2025ರಂದು ಎಕ್ಸ್‌ ಖಾತೆದಾರರೊಬ್ಬರು ವಿದ್ಯಾರ್ಥಿಗಳು ಬ್ಯಾನರ್‌ನ್ನು ಹಿಡಿದಿರುವ ಚಿತ್ರವೊಂದನ್ನು ಹಂಚಿಕೊಂಡು ಈ ಚಿತ್ರಕ್ಕೆ ಶೀರ್ಷಿಕೆಯಾಗಿ ʼShare and comment if you resonate with these kids'thoughts! #GetOutStalinʼ ಎಂದು ಬರೆದು ಪೊಸ್ಟ್‌ ಮಾಡಿರುವುದನ್ನು ನೋಡಬಹುದು.

Share and comment if you resonate with these kids'thoughts!#GetOutStalin pic.twitter.com/kYKufDDX0U

— Sanjeev Kumar (@sanjeev_books) February 22, 2025


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ಫೋಟೋವನ್ನು ಎಐ ಟೂಲ್‌ನ ಮೂಲಕ ರಚಿಸಲಾಗಿದೆ.

ವೈರಲ್‌ ಆದ ಚಿತ್ರವನ್ನು ಉಪಯೋಗಿಸಿ ನಾವು ಗೂಗಲ್‌ ಲೆನ್ಸ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನಾವು ವಿಡಿಯೋಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಇಲ್ಲಿಯೂ ನಮಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ವೈರಲ್‌ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆವು. ಪರೀಶಿಲಿಸಿದಾಗ ಈ ಫೋಟೋದಲ್ಲಿ ಕಾಣುವ ಕೆಲವು ವಿದ್ಯಾರ್ಥಿನಿಯರ ಮುಖ, ಬೆರಳುಗಳು, ಕಣ್ಣುಗಳು ಸಹಜವಾಗಿಲ್ಲ, ಕೃತಕವಾಗಿರುವುದನ್ನು ನಾವು ನೋಡಬಹುದು. ಇದರಿಂದ ನಮಗೆ ಈ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಅನುಮಾನ ಬಂದಿತು.


​ಅಷ್ಟೇ ಅಲ್ಲ ವೈರಲ್‌ ಆದ ಚಿತ್ರದ ಕೆಳ ಭಾಗದಲ್ಲಿ ಕಾಣುವ ವಾಟರ್‌ ಮಾರ್ಕ್‌ನ್ನು ನಾವಿಲ್ಲಿ ನೋಡಬಹುದು. GROK ಎಂದು ಬರೆದಿರುವುದನ್ನು ನಾವು ಕಂಡುಕೊಂಡೆವು. ಗ್ರೋಕ್‌ ಎಂಬ ವೆಬ್‌ಸೈಟ್‌ನ ಮೂಲಕ ಈ ಚಿತ್ರವನ್ನು ರಚಿಸಲಾಗಿದೆ ಎಂದು ಸಾಭೀತಾಯಿತು. ಗ್ರೋಕ್‌ ಎಂಬುವುದು ಮಲ್ಟಿಮೋಡಲ್ ಇನ್‌ಪುಟ್‌ಗೆ ಸ್ಥಳೀಯ ಬೆಂಬಲವನ್ನು ಹೊಂದಿದೆ, ಇದು ಬಳಕೆದಾರ-ಒದಗಿಸಿದ ಚಿತ್ರಗಳಿಂದ ಸ್ಫೂರ್ತಿ ಪಡೆಯಲು ಅಥವಾ ನೇರವಾಗಿ ಸಂಪಾದಿಸಲು ಅನುವು ಮಾಡಿಕೊಡುತ್ತದೆ. ಇದು ನೈಜ-ಪ್ರಪಂಚದ ಘಟಕಗಳು, ಪಠ್ಯ, ಲೋಗೋಗಳ ನಿಖರವಾದ ದೃಶ್ಯ ವಿವರಗಳನ್ನು ನೀಡಬಹುದು ಮತ್ತು ಮಾನವರ ವಾಸ್ತವಿಕ ಭಾವಚಿತ್ರಗಳನ್ನು ರಚಿಸಲು ಸಹಾಯ ಮಾಡುತ್ತದೆ.



​ಹೀಗಾಗಿ ನಾವು ಚಿತ್ರವನ್ನು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಸೈಟ್‌ ಇಂಜಿನ್‌ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.



​ಮತ್ತಷ್ಟು ನಿಜಾಂಶವನ್ನು ತಿಳಿಯಲು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್‌ ಮಾಡರೇಶನ್‌ʼ ಎಂಬ ಟೂಲ್‌ನ ಮೂಲಕ ನಾವು ಈ ಫೋಟೋವನ್ನು ಪರಿಶೀಲಿಸಿದ್ದೇವೆ. ಇಲ್ಲಿಯೂ ಸಹ ಈ ಚತ್ರ ಎಐ ಮೂಲಕ ರಚಿಸುವ ಸಂಭವನೀಯತೆ 96.9 ಪ್ರತಿಶತ ಎಂದು ಫಲಿತಾಂಶ ನೀಡಿದೆ.



​Wasitai.com ನಲ್ಲಿ ಚಿತ್ರವನ್ನು ಪರೀಶಿಲಿಸಿದಾಗ ಅಲ್ಲಿಯೂ ಸಹ ಈ ಚಿತ್ರ ಎಐ ಬಳಸಿ ರಚಿಸಿರುವುದು ಎಂದು ಸಾಭಿತಾಯಿತು.

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಕೊಂಡು ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಲಾಗುತ್ತಿದೆ.


Claim : #GetOutStalin' ಎಂಬ ಬ್ಯಾನರ್ ಹಿಡಿದು ಪ್ರತಿಭಟಿಸುತ್ತಿರುವ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ

Claimed By : Social Media Users

Claim Reviewed By : Telugu Post Fact Check

Claim Source : Social Media Users

Fact Check : False

ಈ ಲೇಖನವನ್ನು ಮೊದಲು'telugupost.com' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.









share
telugupost.com
telugupost.com
Next Story
X