ವೈದ್ಯಾಧಿಕಾರಿಗೆ ತರಾಟೆ: ವ್ಯಾಪಕ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಗೋವಾ ಆರೋಗ್ಯ ಸಚಿವ
ವಿಶ್ವಜಿತ್ ರಾಣೆಯನ್ನು ಸಂಪುಟದಿಂದ ಹೊರ ಹಾಕುವಂತೆ ಕಾಂಗ್ರೆಸ್ ಆಗ್ರಹ

ವಿಶ್ವಜಿತ್ ರಾಣೆ | PTI
ಪಣಜಿ: ರೋಗಿಯೊಬ್ಬರೊಂದಿಗೆ ದುರಹಂಕಾರದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ, ಅವರನ್ನು ಅಮಾನತುಗೊಳಿಸಿದ್ದ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ವಿರುದ್ಧ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಪ್ರತಿಭಟನೆಗಿಳಿದಿರುವ ಹಿನ್ನೆಲೆಯಲ್ಲಿ, ಸೋಮವಾರ ಅವರು ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ. ಇದಕ್ಕೂ ಮುನ್ನ, ನಾನು ಈ ಕ್ರಮವನ್ನು ಸಾರ್ವವಜನಿಕರ ಹಿತದೃಷ್ಟಿಯಿಂದ ಕೈಗೊಂಡಿದ್ದೇನೆ ಹಾಗೂ ವೈದ್ಯಕೀಯ ಸೇವೆಗಳಿಗೆ ಯಾವುದೇ ಅಡಚಣೆಯುಂಟಾಗುವುದಿಲ್ಲ ಎಂದು ಅವರು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದರು.
ಆದರೆ, ಅವರ ವಿರುದ್ಧ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಶನಿವಾರ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಸಚಿವ ವಿಶ್ವಜಿತ್ ರಾಣೆಯನ್ನು ಸಚಿವ ಸಂಪುಟದಿಂದ ಹೊರ ಹಾಕಬೇಕು ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಆಗ್ರಹಿಸಿದೆ.
ಸಚಿವ ವಿಶ್ವಜಿತ್ ರಾಣೆ ಅವರು ಭಾರತೀಯ ವೈದ್ಯಕೀಯ ಒಕ್ಕೂಟ ಹಾಗೂ ಗೋವಾ ಸ್ಥಾನಿಕ ವೈದ್ಯಾಧಿಕಾರಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳಿಂದ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಈ ಸಂಘಟನೆಗಳು ಮುಷ್ಕರ ಹೂಡುವುದಾಗಿಯೂ ಬೆದರಿಕೆ ಒಡ್ಡಿವೆ.