ವಿದೇಶಕ್ಕೆ ಹೋಗುವುದು ಮಕ್ಕಳಲ್ಲಿರುವ ಹೊಸ ರೋಗ ಎಂದ ಉಪರಾಷ್ಟ್ರಪತಿ ಜಗದೀಪ್ ಧನಕರ್

ಜಗದೀಪ್ ಧನಕರ್ | PC : NDTV
ಹೊಸದಿಲ್ಲಿ: ವಿದೇಶಕ್ಕೆ ಹೋಗುವುದು ದೇಶದ ಮಕ್ಕಳನ್ನು ಕಾಡುತ್ತಿರುವ ಹೊಸ ಕಾಯಿಲೆಯಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ರಾಜಸ್ಥಾನದ ಸಿಕಾರ್ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, ವಿದೇಶಕ್ಕೆ ಹೋಗುವುದು ಮಕ್ಕಳ ನಡುವೆ ಇರುವ ಹೊಸ ರೋಗವಾಗಿದೆ. ಮಕ್ಕಳು ವಿದೇಶಕ್ಕೆ ಹೋಗುವುದನ್ನು ʼಫಾರೆಕ್ಸ್ ಡ್ರೈನ್ ಮತ್ತು ಬ್ರೈನ್ ಡ್ರೈನ್ʼ ಎಂದು ಕರೆದಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಶಿಕ್ಷಣದ ವ್ಯಾಪಾರೀಕರಣವು ಅದರ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ರಾಷ್ಟ್ರದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಮಗು ಉತ್ಸಾಹದಿಂದ ವಿದೇಶಕ್ಕೆ ಹೋಗಲು ಬಯಸುತ್ತದೆ, ಅವರು ಹೊಸ ಕನಸನ್ನು ಕಾಣುತ್ತಾರೆ, ಆದರೆ ಅವರಿಗೆ ಯಾವ ಸಂಸ್ಥೆಗೆ ಹೋಗುತ್ತೇನೆ, ಯಾವ ದೇಶಕ್ಕೆ ಹೋಗುತ್ತಾನೆ ಎಂಬ ಬಗ್ಗೆ ಗೊತ್ತಿರುವುದಿಲ್ಲ ಎಂದು ಹೇಳಿದ್ದಾರೆ.
2024ರಲ್ಲಿ ಸರಿಸುಮಾರು 13 ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರ ಭವಿಷ್ಯದ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತಿದೆ, ಅವರು ಇಲ್ಲಿ ಓದಿದ್ದರೆ ಅವರ ಭವಿಷ್ಯ ಎಷ್ಟು ಉಜ್ವಲವಾಗುತ್ತಿತ್ತು ಎಂದು ಜನರು ಈಗ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಜಗದೀಪ್ ಧನಕರ್ ಹೇಳಿದ್ದಾರೆ.







