ದಿಲ್ಲಿ: ಜೈನ ಧಾರ್ಮಿಕ ಕಾರ್ಯಕ್ರಮದ ಸಂದರ್ಭ1 ಕೋ. ರೂ. ಮೌಲ್ಯದ ಚಿನ್ನದ ಕಳಸಗಳ ಕಳವು

PC: X \ @TheDailyPioneer
ಹೊಸದಿಲ್ಲಿ, ಸೆ. 6: ದಿಲ್ಲಿಯ ಕೆಂಪು ಕೋಟೆಯ ಆವರಣದಲ್ಲಿ ನಡೆದ ಜೈನ ಧಾರ್ಮಿಕ ಕಾರ್ಯಕ್ರಮದಿಂದ 1.5 ಕೋಟಿ ರೂ. ಮೌಲ್ಯದ ಎರಡು ಚಿನ್ನದ ಕಳಸ ಹಾಗೂ ಇತರ ಮೌಲ್ಯಯುತ ವಸ್ತುಗಳನ್ನು ಕಳವುಗೈಯಲಾಗಿದೆ.
ಕಳ್ಳ ಜೈನ ಅರ್ಚಕನ ವೇಷದಲ್ಲಿ ಬಂದು ಮೌಲ್ಯಯುತ ವಸ್ತುಗಳನ್ನು ದೋಚಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸಿದೆ. ಶಂಕಿತನನ್ನು ಗುರುತಿಸಲಾಗಿದೆ. ಆತನನ್ನು ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಈ ಬೆಲೆಬಾಳುವ ವಸ್ತುಗಳು ಉದ್ಯಮಿ ಸುಧೀರ್ ಜೈನ್ ಅವರ ಒಡೆತನದಲ್ಲಿದ್ದುವು. ಅವರು ಪ್ರತಿದಿನ ಧಾರ್ಮಿಕ ವಿಧಿಗಳಿಗೆ ಇವುಗಳನ್ನು ತರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಪು ಕೋಟೆಯ ಆವರಣದಲ್ಲಿ ಆಗಸ್ಟ್ 15ರಿಂದ ಆರಂಭವಾಗಿದ್ದ 10 ದಿನಗಳ ಧಾರ್ಮಿಕ ಕಾರ್ಯಕ್ರಮ ‘ದಸಲಕ್ಷನ್ ಮಹಾಪರ್ವ’ದ ಸಂದರ್ಭ ಬುಧವಾರ ಈ ಕಳವು ನಡೆದಿದೆ. ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದಾಗ ವಸ್ತುಗಳು ಕಾಣೆಯಾಗಿರುವುದು ಬೆಳಕಿಗೆ ಬಂತು ಎಂದು ಅವರು ತಿಳಿಸಿದ್ದಾರೆ.
Next Story





