ಚಿನಿವಾರ ಪೇಟೆಯಲ್ಲಿ ದುಬಾರಿಯಾದ ಚಿನ್ನ | 10 ಗ್ರಾಂಗೆ 1.3 ಲಕ್ಷ ರೂ. ಬೆಲೆ

ಹೊಸದಿಲ್ಲಿ: ಸಾಗರೋತ್ತರ ಮಾರುಕಟ್ಟೆಗಳಲ್ಲಿನ ಸದೃಢ ಖರೀದಿ ಹಾಗೂ ರೂಪಾಯಿ ಮೌಲ್ಯದಲ್ಲಿನ ದಾಖಲೆ ಕುಸಿತದ ಕಾರಣಕ್ಕೆ ಸೋಮವಾರ ದಿಲ್ಲಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಾಗಾಲೋಟದ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 9,700 ರೂ. ಏರಿಕೆ ಆಗುವ ಮೂಲಕ, ಪ್ರತಿ 10 ಗ್ರಾಂಗೆ 1,30,300 ರೂ.ಗೆ ತಲುಪಿದೆ.
ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ಪ್ರಕಾರ, ಶುಕ್ರವಾರ ಶೇ. 99.9 ಪರಿಶುದ್ಧತೆಯ ಪ್ರತಿ 10 ಗ್ರಾಂ ಚಿನ್ನದ ದರ 1,20,600 ರೂ.ಗೆ ಅಂತ್ಯಗೊಂಡಿತ್ತು.
ಸೋಮವಾರ ಸ್ಥಳೀಯ ಚಿನಿವಾರ ಪೇಟೆಯಲ್ಲಿ ಶೇ. 99.5 ಪರಿಶುದ್ಧತೆಯ ಪ್ರತಿ 10 ಗ್ರಾಂ ಚಿನ್ನದ ದರ 2,700 ರೂ.ನಷ್ಟು ಏರಿಕೆ ಕಂಡು, ಎಲ್ಲ ತೆರಿಗೆಗಳೂ ಸೇರಿದಂತೆ ಪ್ರತಿ 10 ಗ್ರಾಂಗೆ 1,22,700 ರೂ. ತಲುಪಿತು. ಇದಕ್ಕೂ ಹಿಂದಿನ ಅವಧಿಯಲ್ಲಿ 1,20,000 ರೂ.ಗೆ ಅಂತ್ಯಗೊಂಡಿತ್ತು.
Next Story





