ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ, ಚಿನ್ನವೂ ದುಬಾರಿ!

ಸಾಂದರ್ಭಿಕ ಚಿತ್ರ | Photo Credit : freepik
ಡಿಸೆಂಬರ್ 10ರಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೇರಿದ್ದು, ಶೀಘ್ರದಲ್ಲೇ 2 ಲಕ್ಷ ರೂಪಾಯಿಯಾಗುವ ಸಾಧ್ಯತೆಯಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಪ್ರತಿದಿನ ಏರಿಳಿತದ ಹಾದಿಯಲ್ಲಿ ಸಾಗುತ್ತಿವೆ. ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಯುತ್ತಿದೆ. ಹೀಗಾಗಿ ಜನರನ್ನು ಗೊಂದಲಕ್ಕೆ ಈಡುಮಾಡಿದೆ. ಬುಧವಾರ ಮಂಗಳೂರಿನಲ್ಲಿ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ. ದಿಲ್ಲಿಯಲ್ಲಿ ಸತತ ಎರಡನೇ ದಿನವೂ ಒಂದು ಕಿಲೋಗ್ರಾಂ ಬೆಳ್ಳಿ ದುಬಾರಿಯಾಗಿದೆ.
ಡಿಸೆಂಬರ್ 10ರಂದು ಚಿನ್ನ ಮತ್ತು ಬೆಳ್ಳಿ ದರ ಭಾರಿ ಪ್ರಮಾಣದಲ್ಲಿ ಏರಿದೆ. ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೇರಿದ್ದು, ಶೀಘ್ರದಲ್ಲೇ 2 ಲಕ್ಷ ರೂಪಾಯಿಯಾಗುವ ಸಾಧ್ಯತೆಯಿದೆ. ಚಿನ್ನದ ಬೆಲೆಯೂ ಗರಿಷ್ಠ 1 ಲಕ್ಷ 30 ಸಾವಿರ ರೂಪಾಯಿ ತಲುಪಿದೆ. ಬೆಳ್ಳಿ ಬೆಲೆ ರೂ 900 ಹೆಚ್ಚಳವಾಗಿ ಕಿಲೊಗ್ರಾಂಗೆ ರೂ 1,99,000ಕ್ಕೆ ಏರಿಕೆಯಾಗಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?
ಬುಧವಾರ ಡಿಸೆಂಬರ್ 10ರಂದು ಮಂಗಳೂರಿನಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ. 13,031 (+87), 22 ಕ್ಯಾರೆಟ್ ಚಿನ್ನಕ್ಕೆ ರೂ. 11,945 (+80) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,773 (+65) ಬೆಲೆಗೆ ಏರಿಕೆಯಾಗಿದೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಡಿಸೆಂಬರ್ 10 ಬುಧವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ರೂ. 13,031 ಇದ್ದು, ಇಂದು 87 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,310 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು ರೂ. 870 ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
24 ಕ್ಯಾರಟ್ನ ಚಿನ್ನದ ಬೆಲೆ ರೂ. 1,29,430, 22 ಕ್ಯಾರಟ್ ಚಿನ್ನದ ಬೆಲೆ ರೂ. 1,18,640ಕ್ಕೆ ಏರಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ: ರೂ. 13,042, 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ ರೂ, 11,955 ಇದೆ. ಬೆಳ್ಳಿಯ ಬೆಲೆ 1 ಗ್ರಾಂಗೆ ರೂ. 189ಕ್ಕೇರಿದೆ.







