ಸಂಕ್ರಾಂತಿ ನಂತರ ಕುಸಿದ ಚಿನ್ನ; ಮುಂದುವರಿದ ಬೆಳ್ಳಿ ಬೆಲೆ ಏರಿಕೆ

ಸಾಂದರ್ಭಿಕ ಚಿತ್ರ (AI)
ಮುಂಬರುವ ಮದುವೆಯ ಸೀಸನ್ಗೆ ಮೊದಲು ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇಂದಿನ ದರದ ವಿವರ ಇಲ್ಲಿದೆ.
ಜನವರಿ 9ರಿಂದ ಸತತವಾಗಿ ಏರು ಹಾದಿಯಲ್ಲಿದ್ದ ಚಿನ್ನ ಕೊನೆಗೂ ಸಂಕ್ರಾಂತಿಯ ನಂತರ ಅಲ್ಪ ಮಟ್ಟಿಗೆ ಕುಸಿದಿದೆ. ಆದರೆ ಬೆಳ್ಳಿಯ ನಾಗಾಲೋಟ ಮುಂದುವರಿದಿದೆ. ಗುರುವಾರ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 14,254 ರೂ. ನಿಂದ 14,318 ರೂ. ಗೆ ಇಳಿದಿದೆ. ಒಂದು ಗ್ರಾಂ ಆಭರಣ ಚಿನ್ನದ ಬೆಲೆ 13,165 ರೂ. ನಿಂದ 13,125 ರೂ.ಗೆ ಇಳಿದಿದೆ. ಆದರೆ ಬೆಳ್ಳಿಯ ಬೆಲೆ ಒಂದು ಗ್ರಾಂಗೆ 3 ರೂ.ನಿಂದ 5 ರೂ. ವರೆಗೆ ಏರಿಕೆ ಕಂಡಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಒಂದು ಗ್ರಾಂಗೆ 292 ರೂ .ನಿಂದ 295 ರೂ. ಗೆ ಅಲ್ಪಮಟ್ಟಿಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 310 ರೂ. ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದ ಏರಿಳಿತ ಮತ್ತು ಹೂಡಿಕೆದಾರರ ನಡೆ ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಗುರುವಾರ ಜನವರಿ 15ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಮಟ್ಟಿಗೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,318 (-82) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,125 (-75) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,739 (-61) ರೂ. ಬೆಲೆಗೆ ತಲುಪಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಗುರುವಾರ ಬೆಳಗ್ಗಿನ ಚಿನ್ನದ ವಹಿವಾಟಿನ ಪ್ರಕಾರ ಬೆಂಗಳೂರಿನಲ್ಲಿ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,44,010 ರೂ. ಕುಸಿದಿದೆ. 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,32,010 ರೂ. ಗೆ ಇಳಿದಿದೆ. ಬೆಳ್ಳಿಯ ಬೆಲೆ 1 ಕೆಜಿಗೆ 2,57,900 ರೂ.ಗೆ ಏರಿದೆ.
ಕರ್ನಾಟಕದಲ್ಲಿ ಒಂದು ಗ್ರಾಂ ಚಿನ್ನದ ದರ ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ 14,401 ರೂ.
ಇದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 13,201 ರೂ. ಹಾಗೂ 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10,801 ರೂ. ಆಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ 1 ಗ್ರಾಂನ ಬೆಲೆ
ಚೆನ್ನೈ 13,2 ರೂ.
ಹೈದರಾಬಾದ್ 13,201 ರೂ.
ಕೇರಳ 13,201 ರೂ.
ಪುಣೆ 13,201 ರೂ.
ವಡೋದರ 13,206 ರೂ.
ಅಹಮದಾಬಾದ್ 13,206 ರೂ.
ದಿಲ್ಲಿ 13,140 ರೂ
ಕೋಲ್ಕತಾ 13,125 ರೂ
ಜೈಪುರ್ 13,140 ರೂ
ಲಕ್ನೋ 13,140 ರೂ
ಭುವನೇಶ್ವರ್ 13,125 ರೂ







