ಚಿನಿವಾರ ಪೇಟೆಯಲ್ಲಿ ತುಸು ಚೇತರಿಸಿಕೊಂಡ ಚಿನ್ನ; ಇವತ್ತು ಬೆಲೆ ಎಷ್ಟು?

ಹೊಸದಿಲ್ಲಿ: ಕಳೆದ ಒಂದು ತಿಂಗಳಲ್ಲಿ ಹಳದಿ ಲೋಹ ಚಿನ್ನದ ಬೆಲೆ ತೀರಾ ದುಬಾರಿಯಾಗಿದ್ದು, 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಗಮನಾರ್ಹ ಪ್ರಮಾಣದ ಏರಿಕೆಯಾಗಿದೆ. ಇದಕ್ಕೆ ಭಾರತದ ಚಿನಿವಾರ ಪೇಟೆಯಲ್ಲಿನ ಚಂಚಲತೆ ಕಾರಣ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ ತಿಂಗಳಲ್ಲಿ ಸಾರ್ವಕಾಲಿಕ ಏರಿಕೆ ಕಂಡಿದ್ದ 24 ಕ್ಯಾರೆಟ್ ಚಿನ್ನದ ಬೆಲೆ, ಪ್ರತಿ 10 ಗ್ರಾಂಗೆ 1,32,770 ರೂ.ವರೆಗೂ ತಲುಪಿತ್ತು. ಆದರೆ, ಅಕ್ಟೋಬರ್ ತಿಂಗಳಾಂತ್ಯ ಹಾಗೂ ನವೆಂಬರ್ ಮೊದಲ ವಾರದಲ್ಲಿ ಕೊಂಚ ಇಳಿಮುಖವಾಗಿತ್ತು.
ಗುರುವಾರ ಮತ್ತೆ ಎಲ್ಲ ಪರಿಶುದ್ಧತೆಯ ಚಿನ್ನದ ಬೆಲೆಯಲ್ಲಿ ತುಸು ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ 43 ರೂ. ಏರಿಕೆಯಾಗಿ 12,191 ರೂ. ತಲುಪಿತು. ಅದೇ ರೀತಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 40 ರೂ.ನಂತೆ ಏರಿಕೆ ಕಂಡು 11,175 ರೂ.ಗೆ ತಲುಪಿದರೆ, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 32 ರೂ. ಏರಿಕೆಯಾಗಿ, 9,143ಕ್ಕೆ ತಲುಪಿತು.
Next Story





