ಚಿನ್ನದ ದರದಲ್ಲಿ ಅಲ್ಪ ಇಳಿಕೆ; ಇವತ್ತಿನ ಚಿನ್ನದ ಬೆಲೆ ಎಷ್ಟಿದೆ?

ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ ದರ 8,020ರೂ.ನಂತೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8 ಗ್ರಾಂ. ಚಿನ್ನ 64,160 ರೂ.ಗೆ ಮಾರಾಟವಾಗಿದೆ. ಇದು ಸೋಮವಾರದ ದರಕ್ಕೆ ಹೋಲಿಕೆ ಮಾಡಿದರೆ ಮಂಗಳವಾರ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿರುವುದನ್ನು ಸೂಚಿಸುತ್ತದೆ ಎಂದು ವರ್ತಕರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ.ಗೆ ದರ 8,749 ರೂ.ಗೆ ಮಾರಾಟವಾಗಿದೆ. ಅದರಂತೆ 24 ಕ್ಯಾರೆಟ್ನ ಒಂದು ಪವನ್ ಅಂದರೆ 8 ಗ್ರಾಂ. ಚಿನ್ನದ ದರವು 69,992ರೂ. ಆಗಿದೆ.
ದಿಲ್ಲಿಯಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ 1 ಗ್ರಾಂಗೆ ದರ 8,035ರೂ.ನಂತೆ ಮಾರಾಟವಾಗಿದೆ. ಅದರಂತೆ 8 ಗ್ರಾಂ. ಚಿನ್ನ 64,280ರೂ.ಗೆ ಮಾರಾಟವಾಗುತ್ತಿದೆ.
ಚೆನ್ನೈನಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ 1 ಗ್ರಾಂಗೆ 8,020 ರೂ. ನಂತೆ ಮಾರಾಟವಾಗಿದೆ. ಅದರಂತೆ 8 ಗ್ರಾಂ. ಚಿನ್ನ 64,160 ರೂ. ಗೆ ಮಾರಾಟವಾಗುತ್ತಿದೆ.
ಮುಂಬೈನಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ 1 ಗ್ರಾಂಗೆ 8,020 ರೂ. ನಂತೆ ಮಾರಾಟವಾಗಿದೆ. ಅದರಂತೆ 8 ಗ್ರಾಂ. ಚಿನ್ನ 64,160 ರೂ. ಗೆ ಮಾರಾಟವಾಗುತ್ತಿದೆ.







