ಚಿನ್ನ ಮತ್ತೆ ತುಟ್ಟಿ; ಇಂದು ಚಿನ್ನಕ್ಕೆ ಎಷ್ಟು ದರ?

ಸಾಂದರ್ಭಿಕ ಚಿತ್ರ (credit: Grok)
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮಂಗಳವಾರ ಮತ್ತೆ ಏರಿಕೆಯಾಗಿದ್ದು, ಚಿನ್ನವು ಮತ್ತೆ ತುಟ್ಟಿಯಾಗಿದೆ.
ಬೆಂಗಳೂರಿನ ಚಿನಿವಾರ ಪೇಟೆಯಲ್ಲಿ ಒಂದು ಗ್ರಾಂ ಆಭರಣ ಚಿನ್ನಕ್ಕೆ 45 ರೂ. ಏರಿಕೆಯಾಗಿ 8995 ರೂ.ವಿನಂತೆ ಮಾರಾಟ ಆಗಿದೆ. 8 ಗ್ರಾಂ ಚಿನ್ನಕ್ಕೆ 71960 ರೂ.ವಿನಂತೆ ಬಿಕರಿಯಾಗಿದೆ.
ಮಂಗಳವಾರ ಚೆನ್ನೈನಲ್ಲಿ 10 ಗ್ರಾಂ ಆಭರಣ ಚಿನ್ನಕ್ಕೆ 89511 ರೂ.ವಿನಂತೆ ಮಾರಾಟ ಮಾಡಲಾಗಿದೆ. ಹೊಸದಿಲ್ಲಿಯ ಚಿನಿವಾರ ಪೇಟೆಯಲ್ಲಿ 89663 ರೂ.ವಿನಂತೆ 10 ಗ್ರಾಂ ಚಿನ್ನ ಮಾರಾಟವಾಗಿದೆ.
ಕೋಲ್ಕತ್ತಾದಲ್ಲಿ 10 ಗ್ರಾಂ. 22 ಕ್ಯಾರೆಟ್ ಚಿನ್ನಕ್ಕೆ 89515 ರೂ. ಇದ್ದರೆ, ಮುಂಬೈ ನಲ್ಲಿ 89517 ರೂ.ವಿನಂತೆ 10 ಗ್ರಾಂ ಆಭರಣ ಚಿನ್ನ ಮಾರಾಟವಾಗಿದೆ.
ಇತ್ತಿಚಿನ ದಿನಗಳಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿರುವುದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ.
Next Story





