ಸತತ ಜಿಗಿತದ ನಂತರ ಸ್ವಲ್ಪ ಇಳಿದ ಚಿನ್ನ; ಇಂದಿನ ಚಿನ್ನದ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ದೇಶಿ ಷೇರು ಮಾರುಕಟ್ಟೆಯಲ್ಲಿ ಸತತವಾಗಿ ಏರುಮುಖದಲ್ಲಿ ಸಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಬೆಲೆ ಶುಕ್ರವಾರ ಸ್ವಲ್ಪ ಇಳಿಯುವ ಮೂಲಕ ಆಭರಣ ಖರೀದಿದಾರರಿಗೆ ಸಮಾಧಾನ ತಂದಿದೆ.
ಇದೀಗ ಮನೆಯಲ್ಲಿ ಒಂದು ತುಂಡು ಚಿನ್ನವಿದ್ದರೆ ಸಂತಸಪಡುವ ಕಾಲ ಬಂದಿದೆ. ಜಾಗತಿಕ ಮಾರುಕಟ್ಟೆಯಿಂದ ತೊಡಗಿ ಮನೆಮನೆಗಳಲ್ಲಿ ಸ್ಥಾನಪಡೆದಿರುವ ಚಿನ್ನ ಅಷ್ಟೊಂದು ದುಬಾರಿಯಾಗಿದೆ. ಒಂದು ಕಾಲದಲ್ಲಿ ಆಭರಣ ವ್ಯಾಪಾರ ಭಾರತದ ಅರ್ಥವ್ಯವಸ್ಥೆಯ ಪ್ರಮುಖ ಆಧಾರಸ್ತಂಭವಾಗಿತ್ತು. ಆದರೆ ನಿತ್ಯವೂ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿರುವುದು ಮದುವೆ, ಹಬ್ಬದ ಸೀಸನ್ಗಳಲ್ಲಿ ಗ್ರಾಹಕರ ಜೇಬಿಗೆ ಇನ್ನಷ್ಟು ಕತ್ತರಿ ಹಾಕುತ್ತಿದೆ.
ದೇಶಿ ಷೇರು ಮಾರುಕಟ್ಟೆಯಲ್ಲಿ ಸತತವಾಗಿ ಏರುಮುಖದಲ್ಲಿ ಸಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಬೆಲೆ ಶುಕ್ರವಾರ ಸ್ವಲ್ಪ ಇಳಿಯುವ ಮೂಲಕ ಆಭರಣ ಖರೀದಿದಾರರಿಗೆ ಸಮಾಧಾನ ತಂದಿದೆ. ಚಿನ್ನ ಮಾತ್ರವಲ್ಲ, ಬೆಳ್ಳಿಯ ಬೆಲೆಯೂ ಸತತ ಜಿಗಿತದ ನಂತರ ಕುಸಿದಿದೆ. ಹೀಗಾಗಿ ದೇಶಿ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಕಂಡುಬಂದಿದೆ.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು?
ಶುಕ್ರವಾರ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಇಳಿದಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ 13,418 (-66), ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ರೂ 12,300 (-60)ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನಕ್ಕೆ ರೂ 10,064 (-49) ಬೆಲೆಗೆ ತಲುಪಿದೆ.
ದಿಲ್ಲಿಯಲ್ಲಿ ಚಿನ್ನದ ಬೆಲೆ ಏರಿಕೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗೆ 600 ರೂಪಾಯಿ ಇಳಿದು 1,23,150 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗೆ 660 ರೂಪಾಯಿ ಕಡಿಮೆಯಾಗಿ 1,34,330 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಕೆಜಿಗೆ 2,000 ರೂಪಾಯಿ ಇಳಿಕೆ ಸಾಧಿಸಿದ್ದು 2,09,000 ರೂಪಾಯಿನಷ್ಟಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ:
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು 1,34,180 ರೂಪಾಯಿ
ನಾಗ್ಪುರ 1,34,180 ರೂಪಾಯಿ
ಮುಂಬೈ 1,34,180 ರೂಪಾಯಿ
ಚೆನ್ನೈ 1,34,180 ರೂಪಾಯಿ
ಕೋಲ್ಕತ್ತಾ 1,34,180 ರೂಪಾಯಿ
ಪಾಟ್ನಾ 1,34,230 ರೂಪಾಯಿ
ಸೂರತ್ 1,34,230 ರೂಪಾಯಿ
ಚಂಡೀಗಢ 1,34,330 ರೂಪಾಯಿ
ಲಕ್ನೋ 1,34,330 ರೂಪಾಯಿ
ಶುಕ್ರವಾರ ವಿವಿಧ ನಗರಗಳಲ್ಲಿ ಬೆಳ್ಳಿಯ ಬೆಲೆ:
ನಗರಗಳು ಬೆಲೆ (ಪ್ರತಿ ಕೆಜಿಗೆ)
ದೆಹಲಿ 2,09,000 ರೂಪಾಯಿ
ಬೆಂಗಳೂರು 2,09,000 ರೂಪಾಯಿ
ಚೆನ್ನೈ 2,21,000 ರೂಪಾಯಿ
ಮುಂಬೈ 2,09,000 ರೂಪಾಯಿ
ಕೋಲ್ಕತ್ತಾ 2,09,000 ರೂಪಾಯಿ
ಕೇರಳ 2,21,000 ರೂಪಾಯಿ
ಪಾಟ್ನಾ 2,09,000 ರೂಪಾಯಿ
ಸೂರತ್ 2,09,000 ರೂಪಾಯಿ
ಚಂಡೀಗಢ 2,09,000 ರೂಪಾಯಿ







