ಸಾರ್ವಕಾಲಿಕ ಏರಿಕೆ ನಂತರ ಸ್ವಲ್ಪ ಸ್ಥಿರವಾದ ಚಿನ್ನ

ಸಾಂದರ್ಭಿಕ ಚಿತ್ರ
ಬುಧವಾರವೂ ಚಿನ್ನ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಚಿನ್ನದ ಬೆಲೆ ಕೆಲವೊಮ್ಮೆ ದಿನಕ್ಕೆ 10–20 ರೂ. ಇಳಿಕೆಯಾದರೂ, ಮುಂದಿನ ದಿನವೇ ಸಾವಿರಾರು ರೂಪಾಯಿ ಏರುತ್ತಿರುವುದು ಗ್ರಾಹಕರನ್ನು ಗೊಂದಲಕ್ಕೀಡು ಮಾಡುತ್ತಿದೆ.
2025ರ ಆರಂಭದಿಂದಲೇ ಚಿನ್ನದ ಬೆಲೆ ಹಾಗೂ ಬೆಳ್ಳಿ ಬೆಲೆಗಳಲ್ಲಿ ನಿರಂತರ ಜಿಗಿತ ಕಂಡುಬಂದಿದ್ದು, ಇತ್ತೀಚಿನ ದರಗಳು ಗ್ರಾಹಕರಿಗೆ ಆಘಾತ ನೀಡುತ್ತಿವೆ. ಮಂಗಳವಾರ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿತ್ತು. ಇದೀಗ ಕ್ರಿಸ್ಮಸ್ ಹಬ್ಬದ ಸಂಭ್ರಮದ ನಡುವೆ ಮಾರುಕಟ್ಟೆಯಿಂದ ಸಮಾಧಾನಕರ ಸುದ್ದಿ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರಿಸ್ಮಸ್ ರಜೆ ಇರುವ ಕಾರಣ, ದೊಡ್ಡ ಮಟ್ಟದ ಏರಿಳಿತ ಕಂಡುಬರದೆ ಚಿನ್ನದ ಬೆಲೆ ಸ್ಥಿರವಾಗಿದೆ.
ತಜ್ಞರ ಪ್ರಕಾರ, ಜಾಗತಿಕ ಮಾರುಕಟ್ಟೆಯ ಅಸ್ಥಿರತೆ, ಡಾಲರ್ ದುರ್ಬಲ ವ್ಯವಹಾರ, ಭೌಗೋಳಿಕ-ರಾಜಕೀಯ ಸಂಘರ್ಷಗಳು ಹಾಗೂ ದೇಶೀಯ ಬೇಡಿಕೆ ಚಿನ್ನ–ಬೆಳ್ಳಿ ಬೆಲೆ ಏರಿಕೆಗೆ ಕಾರಣವಾಗಿವೆ. ಕೆಲವೊಮ್ಮೆ ದಿನಕ್ಕೆ 10–20 ರೂ. ಇಳಿಕೆಯಾದರೂ, ಮುಂದಿನ ದಿನವೇ ಸಾವಿರಾರು ರೂಪಾಯಿ ಏರುತ್ತಿರುವುದು ಗ್ರಾಹಕರನ್ನು ಗೊಂದಲಕ್ಕೀಡು ಮಾಡುತ್ತಿದೆ.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು?
ಬುಧವಾರ ಡಿಸೆಂಬರ್ 24ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,893 (+38) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,735 (+35) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,420 (+29) ರೂ. ಬೆಲೆಗೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಬೆಳಗ್ಗೆ 8 ಗಂಟೆಯ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,38,560 ರೂ.ಗೆ ತಲುಪಿದೆ. 22 ಕ್ಯಾರೆಟ್ ಬಂಗಾರ 10 ಗ್ರಾಂಗೆ 1,27,010 ರೂ.ಗೆ ಆಗಿದ್ದು, 18 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 10,392 ರೂ. ಇದೆ. ಮಂಗಳವಾರಕ್ಕಿಂತ ಅಲ್ಪ ಏರಿಕೆ ಕಂಡರೂ, ಒಟ್ಟಾರೆ ಟ್ರೆಂಡ್ ಏರಿಕೆಯ ದಿಕ್ಕಿನಲ್ಲೇ ಸಾಗುತ್ತಿದೆ.
ಏರಿಕೆ ಹಾದಿಯಲ್ಲಿರುವ ಬೆಳ್ಳಿ ದರ
ಚಿನ್ನದ ಬೆನ್ನಲ್ಲೇ ಬೆಳ್ಳಿಯ ದರವೂ ಏರಿಕೆಯಾಗಿದ್ದು, ಬುಧವಾರ ಗ್ರಾಂ ಬೆಳ್ಳಿ 234.10 ರೂ. ಆಗಿದೆ. ಇದರಿಂದ ಕಿಲೋ ಬೆಳ್ಳಿ ದರ 2,34,100 ರೂ. ಗೆ ತಲುಪಿದೆ.
ಪ್ರಮುಖ ನಗರಗಳಲ್ಲಿ ಬುಧವಾರದ ಚಿನ್ನದ ದರ
ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 1,39,320 ರೂ., ಮುಂಬೈ ಮತ್ತು ಹೈದರಾಬಾದ್ನಲ್ಲಿ 1,38,560 ರೂ., ದೆಹಲಿಯಲ್ಲಿ 1,38,710 ರೂ. ದಾಖಲಾಗಿದೆ. ಬಹುತೇಕ ನಗರಗಳಲ್ಲಿ ಬೆಳ್ಳಿ ಕಿಲೋ ದರ 2.23 ಲಕ್ಷ ರೂ.ಯಿಂದ 2.34 ಲಕ್ಷ ರೂ. ನಡುವೆ ವಹಿವಾಟು ನಡೆಯುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ
ಡಿಸೆಂಬರ್ 24ರಂದು ಬುಧವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೊತ್ತಮೊದಲ ಬಾರಿಗೆ ಚಿನ್ನ ಔನ್ಸ್ಗೆ 4500 ಡಾಲರ್ ಗಡಿ ಮೀರಿದೆ. ಬೆಳ್ಳಿ ಮತ್ತು ಪ್ಲಾಟಿನಂ ದಾಖಲೆ ಏರಿಕೆ ಕಂಡಿದೆ. ಸ್ಪಾಟ್ ಗೋಲ್ಡ್ ಶೇ 0.1ರಷ್ಟು ಏರಿಕೆ ಕಂಡು ಪ್ರತಿ ಔನ್ಸ್ಗೆ 4,492.51 ಡಾಲರ್ಗೆ ಏರಿದೆ. ಬೆಳ್ಳಿ ಶೇ 1.2ರಷ್ಟು ಏರಿಕೆ ಕಂಡು ಔನ್ಸ್ಗೆ 72.27 ಡಾಲರ್ ಏರಿಕೆ ಕಂಡಿದೆ.







