ಮತ್ತೆ ಏರುಹಾದಿಯಲ್ಲಿ ಚಿನ್ನ; ಇಂದಿನ ಚಿನ್ನದ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಎರಡು ದಿನದ ಕುಸಿತದ ಬಳಿಕ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಈ ದಿಢೀರ್ ಬದಲಾವಣೆಗೆ ಕಾರಣವೇನು?
ಒಂದೆಡೆ ಅಮೆರಿಕ ಮತ್ತು ರಷ್ಯಾ ನಡುವೆ ಉದ್ವಿಘ್ನತೆ ಮತ್ತೊಂದೆಡೆ ವೆನೆಜುವೆಲಾದಲ್ಲಿ ಅಮೆರಿಕದ ದಾಳಿಯಿಂದಾಗಿ ಯುದ್ಧದ ಭೀತಿ ಹೆಚ್ಚಿಸಿದ್ದರೂ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿಯುತ್ತಿರುವುದು ಅಚ್ಚರಿ ಮೂಡಿಸಿದೆ. ಈ ನಡುವೆ ಎರಡು ದಿನದ ಕುಸಿತದ ಬಳಿಕ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಈ ದಿಢೀರ್ ಬದಲಾವಣೆಗೆ ಕಾರಣವೇನು?
ತಜ್ಞರು ಹೇಳುವ ಪ್ರಕಾರ ಚಿನ್ನ ಸಾರ್ವಕಾಲಿಕ ಏರಿಕೆ ಕಂಡಿದ್ದು, ಇನ್ನೂ ಹೆಚ್ಚಿನ ಏರಿಕೆಯಾದಲ್ಲಿ ತಾಜಾ ಖರೀದಿಯ ಕೊರತೆ ಎದುರಿಸಬಹುದು. ಹೀಗಾಗಿ 1,37,800–1,38,000 ರೂ. ರೇಂಜ್ ನಲ್ಲಿರುವಾಗ ಹೂಡಿಕೆದಾರರು ಮಾರಾಟಕ್ಕೆ ಇಳಿದಿದ್ದಾರೆ. ಬೆಲೆಗಳು ಇಎಂಎ ಕ್ಲಸ್ಟರ್ ಗೆ (ಅಂದರೆ ಚಿನ್ನದ ಬೆಲೆಯ ಟ್ರೆಂಡ್, ಆವೇಗ ಮತ್ತು ಸಂಭಾವ್ಯ ಬೆಂಬಲ/ಪ್ರತಿರೋಧದ ವಲಯದ ಸಮಗ್ರ ನೋಟ) ಕೆಳಗೆ ವಹಿವಾಟು ನಡೆಸುತ್ತಿವೆ. ಇದು ಅಲ್ಪಾವಧಿಯ ವಹಿವಾಟು ರಚನೆಯನ್ನು ಸೂಚಿಸುತ್ತದೆ. ಬೆಲೆ ವಿಸ್ತರಣೆಯಾಗುವ ಬದಲು ಚಿನ್ನವನ್ನು ಮಾರಾಟ ಮಾಡುವ ಸಾಧ್ಯತೆಯನ್ನು ಸೂಚಿಸುತ್ತದೆ. ಹೀಗಾಗಿ ಬೆಲೆಯು 1,38,000 ರೂ. ಬಳಿ ದೃಢವಾದ ಬೆಂಬಲ/ ಪ್ರತಿರೋಧದಲ್ಲಿ ವಹಿವಾಟು ನಡೆಸುತ್ತಿದೆ.
ಇಂದಿನ ಚಿನ್ನ-ಬೆಳ್ಳಿ ದರವೆಷ್ಟು?
2026 ಜನವರಿ 9ರ ಶುಕ್ರವಾರದಂದು ಚಿನ್ನದ ಬೆಲೆ 65 ರೂ. ಏರಿಕೆಯಾದರೆ, ಬೆಳ್ಳಿ ಬೆಲೆ 3-4 ರೂ. ಕಡಿಮೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,650 ರೂ ಇದ್ದದ್ದು 12,715 ರೂ. ಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,871 ರೂ. ಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 252 ರೂ. ನಿಂದ 249 ರೂ. ಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 268 ರೂ. ಆಗಿದೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಶುಕ್ರವಾರ ಜನವರಿ 9 ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 13,871 (+71) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,715 (+65) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,403 (+53) ರೂ. ಬೆಲೆಗೆ ತಲುಪಿದೆ.
ಭಾರತದಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆ: 13,871 ರೂ.
22 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆ: 12,715 ರೂ.
18 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆ: 10,403 ರೂ.
ಬೆಳ್ಳಿ ಬೆಲೆ 1 ಗ್ರಾಂಗೆ: 249 ರೂ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆ: 13,871 ರೂ.
22 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆ: 12,715 ರೂ.
ಬೆಳ್ಳಿ ಬೆಲೆ 1 ಗ್ರಾಂಗೆ: 249 ರೂ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ ಗೆ)
ಬೆಂಗಳೂರು: 12,715 ರೂ.
ಚೆನ್ನೈ: 12,800 ರೂ.
ಮುಂಬೈ: 12,715 ರೂ.
ದೆಹಲಿ: 12,730 ರೂ.
ಕೋಲ್ಕತಾ: 12,715 ರೂ.
ಕೇರಳ: 12,715 ರೂ.
ಅಹ್ಮದಾಬಾದ್: 12,720 ರೂ.
ಜೈಪುರ್: 12,730 ರೂ.
ಲಕ್ನೋ: 12,730 ರೂ.
ಭುವನೇಶ್ವರ್: 12,715 ರೂ.







