ಸತತ ಕುಸಿತದ ನಂತರ ಹೊಸ ವರ್ಷಕ್ಕೆ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ

ಸಾಂದರ್ಭಿಕ ಚಿತ್ರ (AI)
ಹತ್ತು ಪ್ರಮುಖ ವಿಶ್ಲೇಷಕರು ಚಿನ್ನದ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದು ವಿಶ್ಲೇಷಿಸಿದ್ದಾರೆ. ಈ ವರ್ಷ ಬೆಳ್ಳಿ ಚಿನ್ನಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶೇ. 80ರಷ್ಟು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
2025ರ ಚಿನ್ನ ಮತ್ತು ಬೆಳ್ಳಿಯ ಬೆಲೆಯ ನಾಗಾಲೋಟ 2026ರಲ್ಲೂ ಮುಂದುವರಿಯುವ ಸಾಧ್ಯತೆಯಿದೆ. ಕಳೆದ ಮೂರು ದಿನಗಳಿಂದ ಸ್ವಲ್ಪ ಕುಸಿದಿದ್ದ ಚಿನ್ನ ಹೊಸ ವರ್ಷದ ಆರಂಭದಲ್ಲೇ ಸ್ವಲ್ಪ ಏರಿಕೆ ಕಂಡಿದೆ. ಚಿನ್ನಪ್ರಿಯರು ಮತ್ತು ಹೂಡಿಕೆದಾರರು ಈ ವರ್ಷವೂ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.
Economic Times ನಡೆಸಿದ ಸಮೀಕ್ಷೆಯಲ್ಲಿ, ಹತ್ತು ಪ್ರಮುಖ ವಿಶ್ಲೇಷಕರು ಚಿನ್ನದ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದು ಊಹಿಸಿದ್ದಾರೆ. ಈ ವರ್ಷ ಬೆಳ್ಳಿ ಚಿನ್ನಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶೇ. 80 ರಷ್ಟು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬೆಳ್ಳಿಗೆ ಕೈಗಾರಿಕಾ ಬೇಡಿಕೆ ಹೆಚ್ಚಾಗಲಿದ್ದು, ಅದರ ಬೆಲೆಯನ್ನು ಆಕಾಶಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ.
ಶೇ.60ರಷ್ಟು ತಜ್ಞರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಔನ್ಸ್ ಗೆ 100 ಡಾಲರ್ ತಲುಪುತ್ತದೆ ಎಂದು ನಂಬಿದ್ದಾರೆ. ಇದು ಪ್ರಸ್ತುತ ಬೆಲೆಗಳಿಗಿಂತ ಶೇ. 40 ರಷ್ಟು ಹೆಚ್ಚಾಗಿದೆ. ಇನ್ನು ಕೆಲವರು ಬೆಳ್ಳಿಯ ಬೆಲೆ 110 ಡಾಲರ್ ದಾಟುತ್ತದೆ ಎಂದು ಹೇಳಿದ್ದಾರೆ. ಈ ನಿರೀಕ್ಷೆಗಳು ನಿಜವಾದಲ್ಲಿ ಬೆಳ್ಳಿಯ ಬೆಲೆ ದಾಖಲೆಯ ಏರಿಕೆಯಾಗುವ ಸಂಭವವಿದೆ.
ಕೇಂದ್ರ ಬ್ಯಾಂಕ್ ಗಳು ಹೊಂದಿರುವ ಮೀಸಲುಗಳು ಚಿನ್ನದ ಬೆಲೆ ಏರಿಕೆಗೆ ಮತ್ತೊಂದು ಕಾರಣ. ಬೆಲೆಗಳು ಏರಿಕೆಯಾಗುವ ನಿರೀಕ್ಷೆಯಿದ್ದರೂ, ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರಲು ತಜ್ಞರು ಸಲಹೆ ನೀಡಿದ್ದಾರೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಗುರುವಾರ, ಜನವರಿ 1ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,506 (+17) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,380 (+15) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,129 (+12) ರೂ. ಬೆಲೆಗೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
24 ಕ್ಯಾರೆಟ್ (10 ಗ್ರಾಂ) ಬೆಲೆ: 1,34,880 ರೂ.
22 ಕ್ಯಾರೆಟ್ (10 ಗ್ರಾಂ) ಬೆಲೆ: 1,23,640 ರೂ.
18 ಕ್ಯಾರೆಟ್ (10 ಗ್ರಾಂ) ಬೆಲೆ: 1,01,160 ರೂ.







