ದಾಖಲೆ ಏರಿಕೆ ಕಂಡ ಚಿನ್ನದ ಬೆಲೆ

ಸಾಂದರ್ಭಿಕ ಚಿತ್ರ (AI)
ಅನಿಶ್ಚಿತ ಸಂದರ್ಭದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಬಹುದಾದ ವಸ್ತುವಾಗಿರುವ ಚಿನ್ನ ಈ ವರ್ಷ ಶೇ 67ರಷ್ಟು ಬೆಲೆಯೇರಿಕೆ ಕಂಡಿದೆ.
ಚಿನ್ನ ಸೋಮವಾರ ಮತ್ತೆ ದಾಖಲೆ ಬೆಲೆಯೇರಿಕೆ ಕಂಡಿದೆ. ದುರ್ಬಲ ಡಾಲರ್ ಮತ್ತು ಅಮೆರಿಕದಲ್ಲಿ ಇನ್ನಷ್ಟು ದರ ಕಡಿತದ ನಿರೀಕ್ಷೆಯ ಕಾರಣದಿಂದ ಜಾಗತಿಕ ಹೂಡಿಕೆದಾರರು ಸುರಕ್ಷಿತ ಆಸ್ತಿಯನ್ನು ಹುಡುಕುತ್ತಿದ್ದಾರೆ. ಹೀಗಾಗಿ ಸ್ಪಾಟ್ ಚಿನ್ನ ಔನ್ಸ್ ಗೆ ದಾಖಲೆ 4,383.73 ಡಾಲರ್ ಗೆ ಏರಿದೆ.
ಅನಿಶ್ಚಿತ ಸಂದರ್ಭದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಬಹುದಾದ ವಸ್ತುವಾಗಿರುವ ಚಿನ್ನ ಈ ವರ್ಷ ಶೇ 67ರಷ್ಟು ಬೆಲೆಯೇರಿಕೆ ಕಂಡಿದೆ. ಸುರಕ್ಷಿತ ಹೂಡಿಕೆಗಳ ನಿರೀಕ್ಷೆ ಮತ್ತು ಕಳೆದ ಬಾರಿ ಫೆಡರಲ್ ರಿಸರ್ವ್ ದರ ಕಡಿತದ ನಂತರ ಅಮೆರಿಕದಲ್ಲಿ ಸಾಲದ ವೆಚ್ಚ ಕಡಿಮೆಯಾಗುವ ನಿರೀಕ್ಷೆ, ದುರ್ಬಲವಾದ ಡಾಲರ್ ಚಿನ್ನದ ಬೆಲೆ ಏರಿಕೆಗೆ ನೆರವಾಗಿದೆ. ಇತರ ಕರೆನ್ಸಿಗಳನ್ನು ಹೊಂದಿರುವ ಖರೀದಿದಾರರಿಗೆ ಚಿನ್ನ ಅಗ್ಗವಾಗಿರುವುದು ಮತ್ತೊಂದು ಕಾರಣವಾಗಿದೆ.
ಭೌಗೋಳಿಕ ರಾಜಕೀಯ ಮತ್ತು ವ್ಯಾಪಾರ ಸಂಘರ್ಷಗಳಿಂದ ಚಾಲಿತ ತೀವ್ರ ಏರಿಕೆ, ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್ ಗಳ ಸ್ಥಿರವಾದ ಖರೀದಿ ಮತ್ತು ಮುಂದಿನ ವರ್ಷ ಬಡ್ಡಿ ದರ ಇನ್ನಷ್ಟು ಕಡಿತವಾಗುವ ನಿರೀಕ್ಷೆಯಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದೆ.
ಪ್ರಸ್ತುತ ಹೂಡಿಕೆದಾರರು 2026ರಲ್ಲಿ ಅಮೆರಿಕ ಫೆಡರಲ್ ರಿಸರ್ವ್ ಶೀಘ್ರದಲ್ಲಿಯೇ ಎರಡು ಬಾರಿ ದರ ಕಡಿತ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇದೇ ಕಾರಣದಿಂದ ಬಡ್ಡಿದರ ನೀಡದ ಚಿನ್ನದಂತಹ ವಸ್ತುವಿನ ಮೇಲೆ ಹೂಡಿಕೆ ಹೆಚ್ಚಾಗಿದೆ. ಬಾಂಡ್ ಗಳು ಮತ್ತು ಠೇವಣಿಗಳು ಬೀಳುವಾಗ ಚಿನ್ನ ಹೆಚ್ಚು ಆಕರ್ಷಣೀಯವಾಗಿ ಕಂಡುಬಂದಿದೆ. ಕುಸಿಯುತ್ತಿರುವ ಡಾಲರ್ ಸೂಚ್ಯಂಕ ವಿದೇಶಿ ಖರೀದಿದಾರರಿಗೆ ಚಿನ್ನವನ್ನು ಅಗ್ಗವಾಗಿಸಿದೆ.
ಹೂಡಿಕೆದಾರರು ಅಮೆರಿಕದ ಆರ್ಥಿಕ ದತ್ತಾಂಶದ ನಿರೀಕ್ಷೆಯಲ್ಲಿದ್ದಾರೆ. ದತ್ತಾಂಶ ಬಂದ ಮೇಲೆ ಚಿನ್ನದ ಬೆಲೆ ಇನ್ನಷ್ಟು ಏರುವ ನಿರೀಕ್ಷೆ ಇದೆ. ಆದರೆ ಪ್ರಸ್ತುತ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣಲಿದ್ದು, ಹತ್ತು ಗ್ರಾಂ ಚಿನ್ನ Rs 1,31,500 ರಿಂದ Rs 1,34,000 ನಡುವೆ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಡಿಸೆಂಬರ್ 22 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,528 ರೂಪಾಯಿ ಇದ್ದು, ಇಂದು 110 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,35,280 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು ರೂ 1,100 ಹೆಚ್ಚಳ ಆಗಿದೆ.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು?
ಸೋಮವಾರ ಡಿಸೆಂಬರ್ 22ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ 13,528 (+110), ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ರೂ 12,400 (+100)
ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ ರೂ 10,146 (+82) ಬೆಲೆಗೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ 13,528 ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ ರೂ 1,35,280 ಇದೆ.
ಮೇಲೆ ತಿಳಿಸಲಾಗಿರುವ ಬೆಲೆಯಲ್ಲಿ ಜಿಎಸ್ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.







