ಸ್ಯಾಮ್ಸಂಗ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಆ್ಯಪಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಸರಕಾರ
ಹೊಸದಿಲ್ಲಿ: ಸ್ಯಾಮ್ಸಂಗ್ ಬಳಕೆದಾರರಿಗೆ ಭದ್ರತೆಗೆ ಸಂಬಂಧಿಸಿದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಅಂತಹುದೇ ಎಚ್ಚರಿಕೆಯನ್ನು ಆ್ಯಪಲ್ ಉತ್ಪನ್ನಗಳ ಬಳಕೆದಾರರಿಗೆ ನೀಡಿದೆ. ಉತ್ಪನ್ನಗಳಲ್ಲಿನ ಹಲವಾರು ದುರ್ಬಲತೆಗಳು ಬಳಕೆದಾರರ ಡೇಟಾ ಮತ್ತು ಸಾಧನದ ಭದ್ರತೆಗೆ ಅಪಾಯವೊಡ್ಡಬಹುದು ಎಂದು ಭಾರತ ಸರ್ಕಾರದ ಈ ಸಂಸ್ಥೆ ಹೇಳಿದೆ.
“ಆ್ಯಪಲ್ ಉತ್ಪನ್ನಗಳಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿವೆ. ಇವು ದಾಳಿಕೋರರಿಗೆ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಬೇಕಾದಂತೆ ಕೋಡ್ ಬಳಸಲು, ಭದ್ರತೆ ನಿರ್ಬಂಧಗಳನ್ನು ತಪ್ಪಿಸಲು, ಸೇವೆಯ ನಿರಾಕರಣೆ ಉಂಟು ಮಾಡಲು, ದೃಢೀಕರಣವನ್ನು ತಪ್ಪಿಸಲು ಮತ್ತು ಸ್ಪೂಫಿಂಗ್ ದಾಳಿ ನಡೆಸಲು ಕಾರಣವಾಗಬಹುದು,” ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
Next Story