ಉತ್ತರಾಧಿಕಾರಿ ಶಿಫಾರಸು ಮಾಡುವಂತೆ ಸಿಜೆಐ ಗವಾಯಿಗೆ ಕೇಂದ್ರ ಸರಕಾರ ಪತ್ರ

ನ್ಯಾಯಮೂರ್ತಿ ಸೂರ್ಯಕಾಂತ್ ಹೆಸರು ಮುಂಚೂಣಿಯಲ್ಲಿ
ಹೊಸದಿಲ್ಲಿ: ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಕೋರಿ ಕೇಂದ್ರ ಸರಕಾರ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಪತ್ರ ಬರೆದಿದೆ.
ಬಿ.ಆರ್. ಗವಾಯಿ ಅವರು ಪ್ರಸ್ತುತ ನಾಲ್ಕು ದಿನಗಳ ಭೂತಾನ್ ಭೇಟಿಯಲ್ಲಿ ಇದ್ದಾರೆ. ಅವರು ಹಿಂದಿರುಗಿ ಬಂದ ಬಳಿಕ ಸರಕಾರಕ್ಕೆ ಶಿಫಾರಸು ಕಳುಹಿಸಲಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ಬಿ.ಆರ್. ಗವಾಯಿ ಅವರು 2025 ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ.
ಹಿರಿತನದ ನಿಯಮಗಳ ಪ್ರಕಾರ ನ್ಯಾಯಮೂರ್ತಿ ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಸರಕಾರದ ಈ ಪತ್ರ ಮುಂದಿನ ಮುಖ್ಯ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯನ್ನು ಆರಂಭಿಸಿದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಹಾಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ಕೆಳಗಿಳಿಯುವ ತಿಂಗಳಿಗೆ ಮುನ್ನ ಆರಂಭವಾಗುತ್ತದೆ.
Next Story





