ಗುಜರಾತ್ ಬೋಟ್ ದುರಂತ : ಪ್ರಮುಖ ಆರೋಪಿಯ ಬಂಧನ
Photo: ANI
ವಡೋದರಾ: ಇಲ್ಲಿಯ ಹರ್ಣಿ ಪ್ರದೇಶದಲ್ಲಿಯ ಮೋಟನಾಥ ಸರೋವರದಲ್ಲಿ ಮನರಂಜನಾ ವಲಯದ ಸಂಪೂರ್ಣ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದ ಪರೇಶ ಶಾ ಎಂಬಾತನನ್ನು ಪೋಲಿಸರು ಗುರುವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಒಂಭತ್ತಕ್ಕೇರಿದೆ. ಕಳೆದ ವಾರ ಸರೋವರದಲ್ಲಿ ಬೋಟ್ ಮುಳುಗಿ 12 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕಿಯರು ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ನಲ್ಲಿ 19 ಜನರನ್ನು ಹೆಸರಿಸಲಾಗಿದೆ.
ವಡೋದರಾ ಮಹಾನಗರ ಪಾಲಿಕೆಯು ಮೋಟನಾಥ ಸರೋವರದಲ್ಲಿ ಮನರಂಜನಾ ಚಟುವಟಿಕೆಗಳನ್ನು ನಡೆಸುವ ಮತ್ತು ಬೋಟ್ಗಳನ್ನು ನಿರ್ವಹಿಸುವ ಗುತ್ತಿಗೆಯನ್ನು ಕೋಟಿಯಾ ಪ್ರಾಜೆಕ್ಟ್ಗೆ ನೀಡಿದ್ದು,ಬಂಧಿತ ಪರೇಶ ಶಾ ಕುಟುಂಬದ ಸದಸ್ಯರು ಪಾಲುದಾರರಾಗಿದ್ದಾರೆ.
ಈವರೆಗೆ ಬಂಧಿಸಲ್ಪಟ್ಟಿರುವವರಲ್ಲಿ ಕೋಟಿಯಾ ಪ್ರಾಜೆಕ್ಟ್ನ ನಾಲ್ವರು ಪಾಲುದಾರರು,ಅದರ ಮ್ಯಾನೇಜರ್ ಮತ್ತು ಬೋಟ್ ನಿರ್ವಾಹಕರು ಸೇರಿದ್ದಾರೆ.
Next Story