ಗುಜರಾತ್ ಸೇತುವೆ ಕುಸಿತ ಪ್ರಕರಣ: ಮೃತರ ಸಂಖ್ಯೆ 15ಕ್ಕೆ ಏರಿಕೆ

Photo credit: PTI
ವಡೋದರ: ಗುಜರಾತ್ನ ವಡೋದರಾ ಜಿಲ್ಲೆಯ ಪಾದರಾ ಬಳಿ ಬುಧವಾರ ಸಂಭವಿಸಿದ ಸೇತುವೆ ಕುಸಿತ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಗುರುವಾರ ಮುಂಜಾನೆ ಮತ್ತೆ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ನದಿಯಲ್ಲಿ ಮುಳುಗಿರುವ ವಾಹನಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಡೋದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್, "ನದಿಯಿಂದ ವಾಹನಗಳನ್ನು ಹೊರ ತೆಗೆಯಲು, ನಿರ್ದಿಷ್ಟವಾಗಿ ನದಿಗೆ ಬಿದ್ದಿರುವ ಟ್ರಕ್ ಅನ್ನು ಹೊರ ತೆಗೆಯಲು ತಾತ್ಕಾಲಿಕ ಅಟ್ಟಣಿಗೆಯನ್ನು ನಿರ್ಮಿಸಲಾಗಿದೆ. ಈ ಅಟ್ಟಣಿಗೆ ನದಿಯ ದಡದಿಂದ ಸುಮಾರು 40 ಮೀಟರ್ ದೂರವಿದೆ. ಹೀಗಾಗಿ, ಭಾರಿ ತೂಕದ ಕ್ರೇನ್ಗಳಿಗೆ ನದಿಯಿಂದ ವಾಹನಗಳನ್ನು ಹೊರಗೆಳೆಯುವುದು ಸಾಧ್ಯವಾಗಲು ನೆಲದಡಿಯಲ್ಲಿ ಬಲವಾದ ಅಟ್ಟಣಿಗೆಯ ಅಗತ್ಯವಿದೆ" ಎಂದು ತಿಳಿಸಿದ್ದಾರೆ.
Next Story





