ಗುಜರಾತ್ ಸಾಕ್ಷಚಿತ್ರ: ಬಿಬಿಸಿಗೆ ದಿಲ್ಲಿ ಹೈಕೋರ್ಟ್ ನಿಂದ ಹೊಸ ನೋಟಿಸ್

Photo: PTI
ಹೊಸದಿಲ್ಲಿ: ಗುಜರಾತ್ ಹತ್ಯಾಕಾಂಡ ಕುರಿತ ಸಾಕ್ಷಚಿತ್ರಕ್ಕೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ಸೋಮವಾರ ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ಗೆ ಹೊಸ ನೋಟಿಸ್ ಜಾರಿಗೊಳಿಸಿದೆ. ‘ಇಂಡಿಯ: ದ ಮೋದಿ ಕ್ವೆಶ್ಚನ್’ ಎಂಬ ಹೆಸರಿನ ಸಾಕ್ಷಚಿತ್ರವು ಭಾರತ, ಅದರ ನ್ಯಾಯಾಂಗ ಮತ್ತು ಪ್ರಧಾನಿ ನರೇಂದ್ರ ಮೋದಿಯ ಘನತೆಗೆ ಮಸಿ ಬಳಿದಿದೆ ಎಂದು ಆರೋಪಿಸಿ ಗುಜರಾತಿನ ಸರಕಾರೇತರ ಸಂಘಟನೆಯೊಂದು ಬಿಬಿಸಿ ವಿರುದ್ಧ ಸಲ್ಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ನ್ಯಾಯಾಲಯ ಈ ನೋಟಿಸ್ ಜಾರಿಗೊಳಿಸಿದೆ.
ಬಿಬಿಸಿಯ ಸಾಕ್ಷಚಿತ್ರವು 2002ರ ಗೋಧ್ರಾ ಗಲಭೆಗೆ ಸಂಬಂಧಿಸಿದೆ ಹಾಗೂ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಟೀಕಿಸುತ್ತದೆ.
ನ್ಯಾಯಮೂರ್ತಿ ಸಚಿನ್ ದತ್ತ ಅವರನ್ನೊಳಗೊಂಡ ಏಕ ಸದಸ್ಯ ನ್ಯಾಯಪೀಠವು ಬಿಬಿಸಿ (ಯುಕೆ) ಮತ್ತು ಬಿಬಿಸಿ (ಇಂಡಿಯ) ಸೇರಿದಂತೆ ‘‘ಎಲ್ಲಾ ಸ್ವೀಕಾರಾರ್ಹ ವಿಧಾನಗಳ’’ ಮೂಲಕ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು. ಪ್ರಕರಣದ ಮುಂದಿನ ವಿಚಾರಣೆಯು ಡಿಸೆಂಬರ್ 15ರಂದು ನಡೆಯಲಿದೆ.
Next Story





