ಗುಜರಾತ್: ಔಷಧ ಕಾರ್ಖಾನೆ ಬಾಯ್ಲರ್ ಸ್ಪೋಟ; ಇಬ್ಬರು ಮೃತ್ಯು, 20 ಕಾರ್ಮಿಕರಿಗೆ ಗಾಯ

Screengrab : X
ಭರೂಚ್, ನ. 12: ಗುಜರಾತ್ ನ ಬರೂಚ್ ಜಿಲ್ಲೆಯಲ್ಲಿರುವ ಔಷದ ತಯಾರಿಕಾ ಕಾರ್ಖಾನೆಯಲ್ಲಿ ಬುಧವಾರ ಮುಂಜಾನೆ ಬಾಯ್ಲರ್ ಸ್ಫೋಟಗೊಂಡು ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಹಾಗೂ ಇತರ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಖಾ ಡಿಐಡಿಸಿ ಪ್ರದೇಶದಲ್ಲಿರುವ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಮುಂಜಾನೆ ಸುಮಾರು 2.30ಕ್ಕೆ ಈ ಘಟನೆ ಸಂಭವಿಸಿದೆ.
‘‘ಕಾರ್ಖಾನೆಯ ಒಳಗೆ ಸಂಭವಿಸಿದ ಬಾಯ್ಲರ್ ಸ್ಫೋಟದಿಂದ ಬೆಂಕಿ ಹತ್ತಿಕೊಂಡಿತು. ಅನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು’’ ಎಂದು ಭರೂಚ್ ಜಿಲ್ಲಾಧಿಕಾರಿ ಗೌರಂಗ್ ಮಕ್ವಾನ ತಿಳಿಸಿದ್ದಾರೆ.
‘‘ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕಾರ್ಖಾನೆಯ ಒಂದು ಭಾಗ ಕುಸಿದು ಬಿತ್ತು. ಹೆಚ್ಚಿನ ಕಾರ್ಮಿಕರು ಪಾರಾಗುವುದರಲ್ಲಿ ಸಫಲರಾದರು. ಆದರೆ, ಇಬ್ಬರು ಸಿಲುಕಿಕೊಂಡು ಸಾವನ್ನಪ್ಪಿದರು’’ ಎಂದು ಅವರು ಹೇಳಿದ್ದಾರೆ.
Next Story





