Gujarat | SIR ಬಳಿಕ 73 ಲಕ್ಷ ಮತದಾರರಿಗೆ ಕೊಕ್!

ಸಾಂದರ್ಭಿಕ ಚಿತ್ರ | Photo Credit : PTI
ಅಹಮದಾಬಾದ್: ಗುಜರಾತ್ ನಲ್ಲಿ ನಡೆದ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ಅಭಿಯಾನದ ನಂತರ, ಶುಕ್ರವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಸುಮಾರು 73 ಲಕ್ಷ ಮತದಾರರನ್ನು ಈ ಮತ ಪಟ್ಟಿಯಿಂದ ಕೈಬಿಡಲಾಗಿದೆ.
ಕರಡು ಮತ ಪಟ್ಟಿಯಿಂದ ಸುಮಾರು 74 ಲಕ್ಷ ಮತದಾರರನ್ನು ಕೈಬಿಡಲಾಗಿದ್ದು, ಇದೀಗ ಒಟ್ಟು ಮತದಾರರ ಸಂಖ್ಯೆ 4.34 ಕೋಟಿಗೆ ಇಳಿಕೆಯಾಗಿದೆ. ಇದಕ್ಕೂ ಮುನ್ನ ರಾಜ್ಯದ ಮತದಾರರ ಸಂಖ್ಯೆ 5.08 ಕೋಟಿಯಷ್ಟಿತ್ತು. ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆ ಅಭಿಯಾನದ ನಂತರ ಒಟ್ಟು 73.73 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹರೀತ್ ಶುಕ್ಲಾ ತಿಳಿಸಿದ್ದಾರೆ.
"ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆ ಅಭಿಯಾನ ಪ್ರಾರಂಭವಾಗುವುದಕ್ಕೂ ಮುನ್ನ, ರಾಜ್ಯದಲ್ಲಿ ಒಟ್ಟು 5,08,43,436 ಮತದಾರರಿದ್ದರು. ಅಭಿಯಾನದ ಬಳಿಕ ಪ್ರಕಟಗೊಂಡಿರುವ ಕರಡು ಮತ ಪಟ್ಟಿಯಲ್ಲಿ ಒಟ್ಟು 4,34,70,109 ಮತದಾರರಿದ್ದಾರೆ" ಎಂದು ಅವರು ಹೇಳಿದ್ದಾರೆ.
Next Story





