ಮದ್ಯಪಾನಿಗಳು ವಾಹನ ಚಲಾಯಿಸದಂತೆ ನೋಡಿಕೊಳ್ಳಿ: ಬಾರ್, ಕ್ಲಬ್ ಗಳಿಗೆ ಗುರುಗ್ರಾಮ ಪೊಲೀಸರಿಂದ ಸೂಚನೆ

ಸಾಂದರ್ಭಿಕ ಚಿತ್ರ | Photo Credit : freepik.com
ಗುರುಗ್ರಾಮ,ನ.9: ಯಾವುದೇ ಗ್ರಾಹಕನು, ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದಂತೆ ನೋಡಿಕೊಳ್ಳಬೇಕೆಂದು ಗುರುಗ್ರಾಮ ಪೊಲೀಸರು ಎಲ್ಲಾ ಬಾರ್ ಗಳು ಹಾಗೂ ಕ್ಲಬ್ ಗಳಿಗೆ ಸಲಹಾಪತ್ರವೊಂದನ್ನು ಜಾರಿಗೊಳಿಸಿದೆ.
ಸಲಹಾಪತ್ರದ ಪ್ರಕಾರ, ಬಾರ್ ಗಳು ಹಾಗೂ ಕ್ಲಬ್ ಗಳ ಬೌನ್ಸರ್ ಗಳು ಮತ್ತು ಸಿಬ್ಬಂದಿಯು, ಮದ್ಯಪಾನಿಗಳಿಗೆ ವಾಹನ ಸಾರಿಗೆಯ ವ್ಯವಸ್ಥೆ ದೊರೆಯುವುದನ್ನು ಖಾತರಿಪಡಿಸಬೇಕು ಎಂದು ಸಲಹಾಪತ್ರದಲ್ಲಿ ತಿಳಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ 168 ಸೆಕ್ಷನ್ ನಡಿ, ಈ ಬಗ್ಗೆ ನೋಟಿಸೊಂದನ್ನು ಗುರುಗ್ರಾಮ ಜಿಲ್ಲೆಯ ಎಲ್ಲ ಬಾರ್ ಹಾಗೂ ಕ್ಲಬ್ ಗಳ ನಿರ್ವಾಹಕರಿಗೆ ಕಳುಹಿಸಲಾಗಿದೆಯೆಂದು ಹರ್ಯಾಣ ಪೊಲೀಸ್ ವರಿಷ್ಠ ಓ.ಪಿ.ಸಿಂಗ್ ತಿಳಿಸಿದ್ದಾರೆ.
ಒಂದು ವೇಳೆ ಈ ಸಲಹಾಪತ್ರದಲ್ಲಿನ ಸೂಚನೆಗಳನ್ನು ಅನುಸರಿಸಲು ವಿಫಲವಾದ ಯಾವುದೇ ಘಟಕದ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
Next Story





