ಜ್ಞಾನವಾಪಿ ಪ್ರಕರಣ: 1991ರ ಮೂಲ ದಾವೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ್ದ ಮನವಿ ತಿರಸ್ಕರಿಸಿದ ವಾರಣಾಸಿ ನ್ಯಾಯಾಲಯ

Photo credit: PTI
ವಾರಣಾಸಿ: ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿ 1991ರ ಮೂಲ ದಾವೆಯನ್ನು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಿಂದ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ಜಿಲ್ಲಾ ನ್ಯಾಯಾಧೀಶ ಜಯ ಪ್ರಕಾಶ್ ತಿವಾರಿ ಅವರು ಸೋಮವಾರ ವರ್ಗಾವಣೆ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ವಕೀಲ ವಿಜಯ್ ಶಂಕರ್ ರಸ್ತೋಗಿ ತಿಳಿಸಿದ್ದಾರೆ.
ಅರ್ಜಿದಾರರು ಮೂಲ ದಾವೆಯಲ್ಲಿ ಕಕ್ಷಿದಾರರಲ್ಲ. ಆದ್ದರಿಂದ ಅಂತಹ ವರ್ಗಾವಣೆಯನ್ನು ಕೋರಲು ಅವರಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಣಿಕುಂಟಲ ತಿವಾರಿ, ನೀಲಿಮಾ ಮಿಶ್ರಾ ಮತ್ತು ರೇಣು ಪಾಂಡೆ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರು ಮೂಲ ದಾವೆ ಹೂಡಿದವರಲ್ಲಿ ಒಬ್ಬರಾದ ದಿವಂಗತ ಹರಿಹರ ಪಾಂಡೆ ಅವರ ಪುತ್ರಿಯರಾಗಿದ್ದಾರೆ.
Next Story





