ಹರ್ಯಾಣ | ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಲಾರಿ ; ಓರ್ವ ಕನ್ವರ್ ಯಾತ್ರಿ ಸಾವು,13 ಜನರಿಗೆ ಗಾಯ

ಸಾಂದರ್ಭಿಕ ಚಿತ್ರ | PTI
ಫರೀದಾಬಾದ್ : ಕನ್ವರಿಯಾಗಳು ಪ್ರಯಾಣಿಸುತ್ತಿದ್ದ ಕ್ಯಾಂಟರ್ ಲಾರಿ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಓರ್ವ ಕನ್ವರ್ ಯಾತ್ರಿ ಮೃತಪಟ್ಟು,ಇತರ 13 ಜನರಿಗೆ ಸುಟ್ಟ ಗಾಯಗಳಾಗಿರುವ ಘಟನೆ ರವಿವಾರ ಹರ್ಯಾಣದ ಫರೀದಾಬಾದ್ನಲ್ಲಿ ಸಂಭವಿಸಿದೆ.
ಲಾರಿಯಲ್ಲಿದ್ದ ಎಲ್ಲರೂ ಕನ್ವರಿಯಾಗಳಾಗಿದ್ದು,ತಮ್ಮ ಕನ್ವರ್ ಯಾತ್ರೆಯ ಭಾಗವಾಗಿ ಗಂಗಾನದಿಯಿಂದ ಜಲವನ್ನು ಸಂಗ್ರಹಿಸಲು ಉತ್ತರಾಖಂಡದ ಹರಿದ್ವಾರಕ್ಕೆ ಪ್ರಯಾಣಿಸುತ್ತಿದ್ದರು.
ಫರೀದಾಬಾದ್ನ ನವಾಡಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು,ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಕನ್ವರ್ ಯಾತ್ರಿ ತಿಗಾಂವ್ ನಿವಾಸಿ ನಿತಿನ್ (20) ಎಂಬಾತನನ್ನು ವೈದ್ಯರ ಸಲಹೆ ಮೇರೆಗೆ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
Next Story





