Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೆಡ್ಲಿ ಮತ್ತು ರಾಣಾ 26/11 ಭಯೋತ್ಪಾದಕ...

ಹೆಡ್ಲಿ ಮತ್ತು ರಾಣಾ 26/11 ಭಯೋತ್ಪಾದಕ ದಾಳಿಯ ಸೂತ್ರಧಾರರು: ವರದಿ

ವಾರ್ತಾಭಾರತಿವಾರ್ತಾಭಾರತಿ10 April 2025 9:16 PM IST
share
ಹೆಡ್ಲಿ ಮತ್ತು ರಾಣಾ 26/11 ಭಯೋತ್ಪಾದಕ ದಾಳಿಯ ಸೂತ್ರಧಾರರು: ವರದಿ

ಮುಂಬೈ: ಬಾಲ್ಯ ಸ್ನೇಹಿತರು ಹಾಗೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಟೋಕ್ ಜಿಲ್ಲೆಯಲ್ಲಿನ ಹಸನಬ್ದಲ್ ನ ಪ್ರತಿಷ್ಠಿತ ಕೆಡೆಟ್ ಕಾಲೇಜಿನ ಸಹಪಾಠಿಗಳಾದ ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಸೈಯದ್ ಗಿಲಾನಿ ಹಾಗೂ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಡಾ. ತಹಾವ್ವುರ್ ಹುಸೈನ್ ರಾಣಾ ಮುಂಬೈ ಮೇಲೆ ನಡೆದಿದ್ದ 26/11 ಭಯೋತ್ಪಾದಕ ದಾಳಿಗೆ ಬುನಾದಿ ಹಾಕಿದ್ದರು ಎಂದು deccanherald.com ವರದಿ ಮಾಡಿದೆ.

ಮುಂಬೈ ಪೊಲೀಸ್ ವಿಭಾಗದ ಅಪರಾಧ ತನಿಖಾ ಇಲಾಖೆಯ ಅಪರಾಧ ಶಾಖೆ ಹಾಗೂ ರಾಷ್ಟ್ರೀಯ ತನಿಖಾ ದಳದ ತನಿಖೆಗಳ ಪ್ರಕಾರ, 64 ವರ್ಷದ ಈ ಇಬ್ಬರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಹಾಗೂ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ-ತೊಯ್ಬಾ ಮತ್ತು ಹರ್ಕತ್-ಉಲ್ ಜಿಹಾದಿ ಇಸ್ಲಾಮಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ.

ಫೆಬ್ರವರಿ ಮತ್ತು ಮಾರ್ಚ್ 2016ರಲ್ಲಿ ತಾನು ಮಾಫಿ ಸಾಕ್ಷಿಯಾಗುತ್ತೇನೆ ಎಂದು ಹೇಳಿ, ಸಾಕ್ಷಿಗಳನ್ನು ಒದಗಿಸುವುದಾಗಿ ಸಂಧಾನದ ಅರ್ಜಿ ಸಲ್ಲಿಸಿದ್ದರಿಂದ, ಹೆಡ್ಲಿಗೆ ಕ್ಷಮಾದಾನ ದೊರೆತಿತ್ತು. ಇದೇ ವೇಳೆ, ಅಮೆರಿಕ ನ್ಯಾಯಾಲಯವೊಂದು ರಾಣಾನನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ಪ್ರವಾದಿ ಮುಹಮ್ಮದ್ ರನ್ನು ಹೀಯಾಳಿಸುವಂತಹ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ಪ್ರತೀಕಾರವಾಗಿ, 2005ರಲ್ಲಿ ಡೆನ್ಮಾರ್ಕ್ ನ ಮೊರ್ಗೆನವಿಸೆನ್ ಜಿಲ್ಲ್ಯಾಂಡ್ಸ್-ಪೋಸ್ಟನ್ ದಿನಪತ್ರಿಕೆಯ ಕಚೇರಿ ಸುದ್ದಿ ಸಂಸ್ಥೆಯ ಮೇಲೆ ಲಷ್ಕರ್-ಇ-ತೊಯ್ಬಾ ಪ್ರಾಯೋಜಿತ ದಾಳಿ ಸಿದ್ಧತೆ ಹಾಗೂ 166 ಮಂದಿಯ ಸಾವು ಹಾಗೂ 300ಕ್ಕೂ ಹೆಚ್ಚು ಮಂದಿ ಗಾಯಗೊಳ್ಳಲು ಕಾರಣವಾಗಿದ್ದ ನವೆಂಬರ್ 26, 2008ರಲ್ಲಿ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಯೋಜನೆಯಾದ ಮಿಕ್ಕಿ ಮೌಸ್ ಯೋಜನೆಯಲ್ಲಿ ಈ ಇಬ್ಬರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು ಎಂದು ಹೇಳಲಾಗಿದೆ.

ಪ್ರತೀಕಾರದ ಯೋಜನೆಯ ಭಾಗವಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದ ಹೆಡ್ಲಿ, ಚಿಕಾಗೊದಲ್ಲಿದ್ದ ತನ್ನ ಬಾಲ್ಯ ಸ್ನೇಹಿತ ರಾಣಾನಿಂದ ಹಣ ಸ್ವೀಕರಿಸುತ್ತಿದ್ದ. ರಾಣಾ ತನ್ನ ಲಷ್ಕರ್-ಇ-ತೊಯ್ಬಾ ನಿರ್ವಾಹಕ ಸಾಜಿದ್ ಮೀರ್, ಐಎಸ್ಐನ ಮೇಜರ್ ಇಕ್ಬಾಲ್ ಹಾಗೂ ಲಷ್ಕರ್-ಇ-ತೊಯ್ಬಾ ಸಂಘಟನೆಯನ್ನು ಸೇರಲು ಪಾಕಿಸ್ತಾನ ಸೇನೆಯನ್ನು ತೊರೆದು, ನಂತರ, ಅಲ್ ಖೈದಾಗೆ ಜಿಗಿದಿದ್ದ ಮೇಜರ್ ಅಬ್ದುಲ್ ರೆಹಮಾನ್ ಪಾಶಾನಿಂದ ಈ ಹಣವನ್ನು ಸಂಗ್ರಹಿಸುತ್ತಿದ್ದ ಎನ್ನಲಾಗಿದೆ.

“ಐಎಸ್ಐ, ಲಷ್ಕರ್-ಇ-ತೊಯ್ಬಾ, ಹುಜಿ, ಹೆಡ್ಲಿ ಮತ್ತು ರಾಣಾ, ಇಲ್ಯಾಸ್ ಕಾಶ್ಮೀರಿ, ಮೇಜರ್ ಇಕ್ಬಾಲ್, ಸಾಜಿದ್ ಮೀರ್ ಪರಸ್ಪರ ನಿಕಟ ಸಂಪರ್ಕ ಹೊಂದಿದ್ದರು” ಎಂದು ತನಿಖೆ ಹಾಗೂ ನ್ಯಾಯಾಲಯದ ದಾಖಲೆಗಳನ್ನು ಆಧರಿಸಿ ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ ಎಂದು deccanherald.com ವರದಿ ಮಾಡಿದೆ.

“26/11 ಭಯೋತ್ಪಾದಕ ದಾಳಿಯ ನಂತರ ಗಲ್ಲು ಶಿಕ್ಷೆಗೆ ಗುರಿಯಾಗುವುದಕ್ಕೂ ಮುನ್ನ, ಪಾಕಿಸ್ತಾನದ ಭಯೋತ್ಪಾದಕ ಮುಹಮ್ಮದ್ ಅಬ್ದುಲ್ ಕಸಬ್ ನೀಡಿದ್ದ ಹೇಳಿಕೆ ಹಾಗೂ ಮಾಫಿ ಸಾಕ್ಷಿಯಾಗಿ ಬದಲಾಗಿದ್ದ ಹೆಡ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ನೀಡಿದ್ದ ಸಾಕ್ಷಿಗಳೆರಡೂ ಒಂದೇ ಬಗೆಯ ಅಂಶಗಳನ್ನು ಹೊಂದಿದ್ದವು” ಎಂದು ಹೇಳಲಾಗಿದೆ.

10 ಮಂದಿ ಭಯೋತ್ಪಾದಕರನ್ನು ನಿಭಾಯಿಸುತ್ತಿದ್ದ ಅಬು ಅಲ್ ಕಾಮಾ ಮತ್ತು ಅಬು ಖಾಫಾ ಹಾಗೂ ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಾರ್ಯನಿರ್ವಾಹಕ ಮೇಜರ್ ಇಕ್ಬಾಲ್ ಹೇಗೆ 26/11 ಭಯೋತ್ಪಾದಕ ದಾಳಿಯಲ್ಲಿ ಪಾತ್ರ ವಹಿಸಿದ್ದರು. ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಾರ್ಯನಿರ್ವಾಹಕ ಕಮಾಂಡರ್ ಝಾಕಿ-ಉರ್ ರೆಹಮಾನ್ ಲಖ್ವಿ ಹಾಗೂ ಲಷ್ಕರ್-ಇ-ತೊಯ್ಬಾ ಸಂಘಟನೆಯ ಸಂಸ್ಥಾಪಕ ಹಫೀಝ್ ಸಯೀದ್ ನೊಂದಿಗೆ ಅವರು ಹೇಗೆ ಸಂಪರ್ಕ ಹೊಂದಿದ್ದರು ಎಂಬ ಕುರಿತು ತನ್ನ ವಿಡಿಯೊ ಕಾನ್ಫರೆನ್ಸ್ ಸಾಕ್ಷಿಯ ವೇಳೆ ಹೆಡ್ಲಿ ವಿಸ್ತೃತವಾಗಿ ವಿವರಿಸಿದ್ದ.

ತನ್ನ ಒಂಭತ್ತು ಬಾರಿಯ ನ್ಯಾಯಾಲಯದ ಹಾಜರಿಯ ವೇಳೆ, ಹೆಡ್ಲಿ ಸುಮಾರು 1,400 ಪ್ರಶ್ನೆಗಳನ್ನು ಎದುರಿಸಿದ್ದ. ಈ ಪೈಕಿ ನಿಕಂ ಸುಮಾರು 750 ಪ್ರಶ್ನೆಗಳನ್ನು ಕೇಳಿದರೆ, ಖಾನ್ ಸುಮಾರು 650 ಪ್ರಶ್ನೆಗಳನ್ನು ಕೇಳಿದ್ದರು.

ವಾಸ್ತವವೆಂದರೆ, ಹೆಡ್ಲಿ ತನ್ನ ಚಟುವಟಿಕೆಗಳನ್ನು ಮರೆ ಮಾಚಲು ಪ್ರಪ್ರಥಮ ವಿಶ್ವ ವಲಸೆ ಸೇವೆಗಳ ಕಚೇರಿಯನ್ನು ತೆರೆಯಲು ರಾಣಾನ ಅನುಮತಿಯನ್ನು ಪಡೆದಿದ್ದ. ತನ್ನ ಪ್ರಮಾಣದ ವೇಳೆ, ತನಗಿರುವ ಐಎಸ್ಐ, ಲಷ್ಕರ್-ಇ-ತೊಯ್ಬಾ, ಒಸಾಮಾ ಬಿಲ್ ಲ್ಯಾಡೆನ್ ನ ಅಲ್ ಖೈದಾದೊಂದಿಗಿನ ಸಂಬಂಧವನ್ನು ಹೆಡ್ಲಿ ಬಹಿರಂಗಗೊಳಿಸಿದ್ದ.

ಹೆಡ್ಲಿಯು 26/11 ಭಯೋತ್ಪಾದಕ ದಾಳಿಗೂ ಮುನ್ನ ಐದು ಬಾರಿ ಹಾಗೂ ದಾಳಿಯ ನಂತರ ಎರಡು ಬಾರಿ ಸೇರಿದಂತೆ ಒಟ್ಟು ಏಳು ಬಾರಿ ಭಾರತಕ್ಕೆ ಭೇಟಿ ನೀಡಿದ್ದ ಸಂಗತಿಯೂ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಭಾರತದಲ್ಲಿ ಬಲವಾದ ಗುರಿಗಳನ್ನು ಗುರುತಿಸಲು ತನಗೆ ಒಪ್ಪಿಸಲಾಗಿದ್ದ ಕೆಲಸವನ್ನು ಕಾರ್ಯಗತಗೊಳಿಸಲು, ತನ್ನ ಚಟುವಟಿಕೆಗಳನ್ನು ಮರೆ ಮಾಚಲು ಪ್ರಪ್ರಥಮ ವಿಶ್ವ ವಲಸೆ ಸೇವೆಗಳ ಕಚೇರಿಯನ್ನು ತೆರೆಯಲು ಅನುಮತಿಯ ಅಗತ್ಯವಿದೆ ಎಂದು ರಾಣಾಗೆ ಹೆಡ್ಲಿ ಸಲಹೆ ನೀಡಿದ್ದ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ, ಭಾರತಕ್ಕೆ ಪ್ರಯಾಣಿಸಲು ಹೇಗೆ ವೀಸಾ ಪಡೆಯಬೇಕು ಎಂಬ ಕುರಿತು ಹೆಡ್ಲಿಗೆ ರಾಣಾ ಪ್ರತಿ ಸಲಹೆ ನೀಡಿದ್ದ ಎಂದೂ ಹೇಳಲಾಗಿದೆ.

ನಂತರ, ಮುಂಬೈ ಮೇಲೆ ನಡೆದಿದ್ದ ದಾಳಿಯ ಗುರಿಯ ಮೇಲೆ ಹೆಡ್ಲಿ ನಡೆಸಿದ್ದ ಕಣ್ಗಾವಲಿನ ಕುರಿತು ರಾಣಾ ಹಾಗೂ ಹೆಡ್ಲಿ ಇಬ್ಬರೂ ಪರಸ್ಪರ ಪರಾಮರ್ಶೆ ನಡೆಸಿದ್ದರು ಎನ್ನಲಾಗಿದೆ. ಮುಂಬೈ ದಾಳಿಯಲ್ಲಿ ಭಾಗಿಯಾಗುವ ಭಯೋತ್ಪಾದಕರಿಗೆ ಪಾಕಿಸ್ತಾನದ ಅತ್ಯುನ್ನತ ಮರಣೋತ್ತರ ಪ್ರಶಸ್ತಿಗಳು ಲಭಿಸಬೇಕು ಎಂದು ಹೆಡ್ಲಿಗೆ ರಾಣಾ ಸೂಚಿಸಿದ್ದ ಎಂಬ ಸಂಗತಿಯೂ ತನಿಖೆಯ ವೇಳೆ ಬಯಲಾಗಿದೆ.

ಹಾಜಿ ಅಶ್ರಫ್ ಎಂದೂ ಕರೆಯಲಾಗುವ ಲಾಹೋರ್ ಮೂಲದ ಉದ್ಯಮಿಯಾದ 56 ವರ್ಷದ ಹೆಡ್ಲಿ, ಭಯೋತ್ಪಾದಕ ಗುಂಪಿನ ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದ. ಸೆಪ್ಟೆಂಬರ್ 24-25, 2002ರಂದು ಗಾಂಧಿನಗರದ ಅಕ್ಷರಧಾಮ ದೇವಾಲಯದ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯನ್ನು ಭದ್ರತಾ ಪಡೆಗಳು ಹಿಮ್ಮೆಟ್ಟಿಸಿದ್ದಾಗ, ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಆತನ ಸೋದರಳಿಯ ಮೃತಪಟ್ಟಿದ್ದ ಎಂದು ಹೇಳಲಾಗಿದೆ.

ತಾನು ಮುಂಬೈನಲ್ಲಿದ್ದಾಗ ರಾಣಾನಿಂದ ಕ್ರಮವಾಗಿ ಅಕ್ಟೋಬರ್ 11, 2006ರಂದು 67,605 ರೂ., ನವೆಂಬರ್ 7, 2006ರಂದು 500 ಅಮೆರಿಕನ್ ಡಾಲರ್, ನವೆಂಬರ್ 30, 2006ರಂದು 17,636 ರೂ. ಹಾಗೂ ಡಿಸೆಂಬರ್ 4, 2006ರಂದು 1,000 ಅಮೆರಿಕನ್ ಡಾಲರ್ ಸೇರಿದಂತೆ ಒಟ್ಟು ನಾಲ್ಕು ಬಾರಿ ಹಣ ಸ್ವೀಕರಿಸಿದ್ದೆ ಎಂದು ಹೆಡ್ಲಿ ಸಾಕ್ಷಿ ನುಡಿದಿದ್ದ. ಮೇಜರ್ ಪಾಶಾ ಕೂಡಾ ಹೆಡ್ಲಿಗೆ ಒಂದು ಬಾರಿ 80,000 ರೂ. ಹಣ ನೀಡಿದ್ದ. ಹೆಡ್ಲಿ ಮುಂಬೈಗೆ ತೆರಳುವುದಕ್ಕೂ ಮುನ್ನ, ಮೇಜರ್ ಇಕ್ಬಾಲ್ ಆತನಿಗೆ 25,000 ಅಮೆರಿಕನ್ ಡಾಲರ್ ನೀಡಿದ್ದ ಎಂಬ ಸಂಗತಿಯೂ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X