ಹೇಮಾ ಸಮಿತಿಯ ವರದಿಯು ಹೃದಯವಿದ್ರಾವಕ: ಭೂಮಿ ಪೆಡ್ನೇಕರ್

ಭೂಮಿ ಪೆಡ್ನೇಕರ್| PTI
ಮುಂಬೈ: ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳಗಳನ್ನು ಬಯಲಿಗೆಳೆದ ಹೇಮಾ ಸಮಿತಿಯ ವರದಿಯನ್ನು ನೋಡಿ, ಓರ್ವ ಮಹಿಳೆಯಾಗಿ ನಾನು ಭಯ ಪಟ್ಟಿದ್ದೇನೆ ಎಂದು ನಟಿ ಭೂಮಿ ಪೆಡ್ನೇಕರ್ ಹೇಳಿದ್ದಾರೆ.
ಕಳೆದ ವರ್ಷದ ಆಗಸ್ಟ್ನಲ್ಲಿ ಬಿಡುಗಡೆಯಾದ ವರದಿಯಲ್ಲಿರುವ ವಿಷಯಗಳು ಹೃದಯವಿದ್ರಾವಕ ಮತ್ತು ಭೀಭತ್ಸವಾಗಿದೆ ಎಂದು ಎಬಿಪಿ ನೆಟ್ವರ್ಕ್ನ ‘‘ಐಡಿಯಾಸ್ ಆಫ್ ಇಂಡಿಯಾ 2025’’ ಕಾರ್ಯಕ್ರಮದಲ್ಲಿ ಮಾತನಾಡಿದ ಪೆಡ್ನೇಕರ್ ನುಡಿದರು.
‘‘ಕೇರಳ ಚಿತ್ರೋದ್ಯಮವು ಭಾರತೀಯ ಚಿತ್ರೋದ್ಯಮದ ಒಂದು ಭಾಗವಾಗಿದೆ. ಅಲ್ಲಿ ಲೈಂಗಿಕ ಶೋಷಣೆಯ ಹೃದಯವಿದ್ರಾವಕ ವಿವರಗಳು ಹೊರಬಂದ ಬಳಿಕ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗಿದೆ. ಇಂದಿನ ಭಾರತದ ಓರ್ವ ಮಹಿಳೆಯಾಗಿ ನಾನು ಹೆದರಿದ್ದೇನೆ. ಆದರೆ, ಈ ಸಮಸ್ಯೆ ಚಿತ್ರೋದ್ಯಮಕ್ಕೆ ಮಾತ್ರ ಸೀಮಿತವಾಗಿಲ್ಲ’’ ಎಂದು ಪೆಡ್ನೇಕರ್ ಹೇಳಿದರು.
Next Story





